ನವದೆಹಲಿ: ಕೃತಕ ಬುದ್ಧಿಮತ್ತೆಯ ಬೆಂಬಲವನ್ನು ಹೊಂದಿರುವ ಗುರುತಿಸುವಿಕೆ (ಫೇಶಿಯಲ್ ರೆಕಗ್ನಿಶನ್) ತಂತ್ರಜ್ಞಾನವನ್ನು ಬಳಸಿ ರೈಲ್ವೆ ನಿಲ್ದಾಣಗಳಲ್ಲಿನ ಸುರಕ್ಷತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಪ್ರಯತ್ನಿಸುತ್ತಿದೆ. ಈ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಅಪರಾಧಿಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಬಂಧಿಸಬಹುದಾಗಿದೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್), ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (ಎಫ್ಆರ್ಎಸ್) ಸದ್ಯ ಅಸ್ತಿತ್ವದಲ್ಲಿರುವ ಡೇಟಾಬೇಸ್ಗಳಾದ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಮತ್ತು ಸಿಸ್ಟಮ್ಸ್ (ಸಿಸಿಟಿಎನ್ಎಸ್) ನೊಂದಿಗೆ ಜೋಡಿಸುವ ಯೋಜನೆಯನ್ನು ಹೊಂದಿದೆ ಎನ್ನಲಾಗಿದೆ.
ರೈಲ್ವೆ ನಿಲ್ದಾಣಗಳಲ್ಲಿ ಅಪರಾಧಿಗಳು ಮತ್ತು ಶಂಕಿತರನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ರೈಲ್ವೇ ನಿಲ್ದಾಣಗಳಲ್ಲಿ, ರೈಲಿನೊಳಗೆ ಪ್ರಯಾಣಿಕರು ಕಳ್ಳತನಕ್ಕೆ ಗುರಿಯಾಗುತ್ತಾರೆ, ಮಾನವ ಕಳ್ಳಸಾಗಣೆಗೊಳಗಾಗುತ್ತಾರೆ. ಭಯೋತ್ಪಾದನೆಯಂತಹ ಕೃತ್ಯಗಳು ಕೂಡ ನಡೆಯುತ್ತವೆ. ಇಂತಹ ಗಂಭೀರ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಸಹಾಯಕ್ಕೆ ಬರಲಿದೆ.
26/11ರ ಮುಂಬಯಿ ದಾಳಿಯ ಬಳಿಕ, ಆರ್ಪಿಎಫ್ ಸಮಗ್ರ ಭದ್ರತಾ ಯೋಜನೆಯನ್ನು ರೂಪಿಸಿತು. “ಭದ್ರತೆಯ ಕೂಲಂಕುಷ ಪರಿಶೀಲನೆಗಾಗಿ ನಾವು 200 ರೈಲ್ವೆ ನಿಲ್ದಾಣಗಳನ್ನು ಗುರುತಿಸಿದ್ದೇವೆ” ಎಂದು ಆರ್ಪಿಎಫ್ನ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.
“ನಾವು, ಪ್ರಯೋಗಿಕವಾಗಿ ಬೆಂಗಳೂರು ನಿಲ್ದಾಣದಲ್ಲಿ ಮುಖ ಗುರುತಿಸುವಿಕೆಯ ತಂತ್ರಜ್ಞಾನವನ್ನು ಅಳವಡಿಸಲು ಪ್ರಾರಂಭಿಸಿದ್ದೇವೆ ಮತ್ತು ಅದನ್ನು ನಮ್ಮ ಇಡೀ ನೆಟ್ವರ್ಕ್ನಲ್ಲಿ ನಿಧಾನವಾಗಿ ಕಾರ್ಯಗತಗೊಳಿಸಲು ಯೋಜಿಸಿದ್ದೇವೆ” ಎಂದು ಕುಮಾರ್ ಹೇಳಿದ್ದಾರೆ.
ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಜುಲೈನಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಲಾಯಿತು ಮತ್ತು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕೂಡ ಪರೀಕ್ಷಿಸಲಾಯಿತು. ಆದರೆ ಕೆಲ ಮಾನವ ಹಕ್ಕುಗಳ ಸಂಘಟನೆಗಳು ಇದನ್ನು ಗೌಪ್ಯತೆ ಉಲ್ಲಂಘನೆ ಮತ್ತು ಅನಗತ್ಯ ಕಣ್ಗಾವಲು ಎಂದು ಕರೆಯುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.