ಅಯೋಧ್ಯೆ: ಕಾರ್ತಿಕ ಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಮಂಗಳವಾರ ಮುಂಜಾನೆ ಅಯೋಧ್ಯೆಯ ಸರಯೂ ನದಿಯ ತೀರದ ಸರಯೂ ಘಾಟ್ನಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಅಂತೆಯೇ ವಾರಣಾಸಿಯ ಗಂಗಾ ನದಿ ತೀರದ ಘಾಟ್ನಲ್ಲಿ ನೂರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಇಂದು ದೇಶದಾದ್ಯಂತ ಇರುವ ಪವಿತ್ರ ನದಿಗಳಲ್ಲಿ ಕಾರ್ತಿಕ ಪುರ್ಣಿಮೆಯ ನಿಮಿತ್ತ ಪವಿತ್ರ ಸ್ನಾನ ಮಾಡುವುದು ವಿಶೇಷ.
ಕಾರ್ತಿಕ್ ಪೂರ್ಣಿಮಾವನ್ನು ದೇವ್ ದೀಪಾವಳಿ ಎಂದೇ ಕರೆಯಲಾಗುತ್ತದೆ. ಈ ದಿನ ಭಕ್ತರು ಗಂಗಾ ನದಿ ಮತ್ತು ಇತರ ಪವಿತ್ರ ನದಿಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ, ದೇವಾಲಯಗಳಲ್ಲಿ ಮತ್ತು ನದಿಗಳ ದಡಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುತ್ತಾರೆ.
ಕಾರ್ತಿಕ ಪೂರ್ಣಿಮಾ ಪ್ರಭೋಧಿನಿ ಏಕಾದಶಿಯೊಂದಿಗೆ ನಿಕಟ ಸಂಬಂಧ ಹೊಂದಿದೆ, ಇದು ಚಾತುರ್ಮಾಸಗಳ ಮುಕ್ತಾಯವನ್ನು ಸೂಚಿಸುತ್ತದೆ. ಚಾತುರ್ಮಾಸ ಎಂದರೆ ವಿಷ್ಣು ನಿದ್ರೆ ಮಾಡುತ್ತಾನೆ ಎಂದು ನಂಬಲಾದ ನಾಲ್ಕು ತಿಂಗಳ ಅವಧಿ. ಪ್ರಬೋಧಿನಿ ಏಕಾದಶಿ ದೇವರ ಜಾಗೃತಿಯನ್ನು ಸೂಚಿಸುತ್ತದೆ. ಈ ದಿನದಂದು ಚಾತುರ್ಮಾಸ ತಪಸ್ಸು ಕೊನೆಗೊಳ್ಳುತ್ತದೆ.
ವಿಷ್ಣುವಿನ ಅವತಾರವಾದ ಕೃಷ್ಣನ ಗೆಳತಿ ರಾಧಾಗೆ ಈ ದಿನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಕೃಷ್ಣ ಮತ್ತು ರಾಧಾ ಈ ದಿನ ರಾಸಲೀಲೆ ನೃತ್ಯ ಮಾಡಿದರು ಮತ್ತು ಕೃಷ್ಣ ಈ ದಿನ ರಾಧೆಯನ್ನು ಆರಾಧಿಸಿದ ಎಂದು ನಂಬಲಾಗಿದೆ.
ಅಯೋಧ್ಯಾ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ನೀಡಿ, ರಾಮಮಂದಿರ ಅಯೋಧ್ಯೆಯಲ್ಲೇ ನಿರ್ಮಾಣವಾಗಬೇಕು ಎಂದು ಆದೇಶಿಸಿದ ಬಳಿಕ ಸರಯೂ ನದಿ ತಟದಲ್ಲಿ ನಡೆಯುತ್ತಿರುವ ಪ್ರಥಮ ಪವಿತ್ರ ಸ್ನಾನ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.