ನವದೆಹಲಿ: ಕೇಂದ್ರ ಗೃಹ ಸಚಿವಾಲಯವು 1,300 ಎನ್ಜಿಒಗಳ ಎಫ್ಸಿಆರ್ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಪರವಾನಗಿಗಳನ್ನು ರದ್ದುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಎಫ್ಸಿಆರ್ಎ ಪರವಾನಗಿಯನ್ನು ಕಳೆದುಕೊಂಡಿರುವ ಕೆಲವು ಸಂಸ್ಥೆಗಳೆಂದರೆ ರಾಜಸ್ಥಾನ ವಿಶ್ವವಿದ್ಯಾಲಯ, ಉತ್ತರ ಪ್ರದೇಶದ ಮೌಲಾನಾ ಆಜಾದ್ ಎಜುಕೇಷನಲ್ ಸೊಸೈಟಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತಮಿಳುನಾಡಿನ ಕ್ರಿಶ್ಚಿಯನ್ ಸಂಸ್ಥೆಗಳಾದ ಕ್ರೈಸ್ಟ್ ಫಾರ್ ಇಂಡಿಯಾ ಮತ್ತು ಇನ್ಫಾಂಟ್ ಜೀಸಸ್ ಮಿಷನ್ ಟ್ರಸ್ಟ್ ಮತ್ತು ಸರ್ಕಾರಿ ನೆರವಿನ ನ್ಯಾಷನಲ್ ಪ್ರೊಡೆಕ್ಟಿವಿಟಿ ಕೌನ್ಸಿಲ್.
ಬಿಹಾರದ ವೀರ್ ಸಾವರ್ಕರ್ ಸಮಾಜ್ ಏವಂ ಶೈಕ್ಷಣಿಕ್ ಸಂಸ್ಥಾನ್ ಮತ್ತು ಮಧ್ಯಪ್ರದೇಶದ ಜೈ ಪ್ರಕಾಶ್ ನಾರಾಯಣ್ ಯುವ ಮಂಡಲ್ ಕೂಡ ತಮ್ಮ ಎಫ್ಸಿಆರ್ಎ ಪರವಾನಗಿಗಳನ್ನು ಕಳೆದುಕೊಂಡಿದೆ.
ಪಟ್ಟಿಯ ಪ್ರಕಾರ, ತಮಿಳುನಾಡಿನಲ್ಲಿನ ಅತಿ ಹೆಚ್ಚು ಎನ್ಜಿಒಗಳು ಪರವಾನಗಿ ಕಳೆದುಕೊಂಡಿವೆ, ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣವಿದೆ.
“ಪುನರಾವರ್ತಿತ ಎಚ್ಚರಿಕೆಗಳು ಮತ್ತು ಕಡ್ಡಾಯ ಕಾನೂನು ಅವಶ್ಯಕತೆಗಳ ಹೊರತಾಗಿಯೂ ವಾರ್ಷಿಕ ಆದಾಯದ ಮಾಹಿತಿಯನ್ನು ಸಲ್ಲಿಸುವಲ್ಲಿ ವಿಫಲವಾದ ಕಾರಣ ಎಫ್ಸಿಆರ್ಎ ಪರವಾನಗಿಗಳನ್ನು ರದ್ದುಪಡಿಸಲಾಗಿದೆ” ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2011 ರವರೆಗೆ 40,000ಕ್ಕೂ ಹೆಚ್ಚು ಎನ್ಜಿಒಗಳನ್ನು ಎಫ್ಸಿಆರ್ಎ ಅಡಿಯಲ್ಲಿ ನೋಂದಾಯಿಸಲಾಗಿದೆ. ಆದರೆ 2014 ರಲ್ಲಿ ಸರ್ಕಾರ ತನ್ನ ಮಾನದಂಡಗಳನ್ನು ಬಿಗಿಗೊಳಿಸಿದ ಹಿನ್ನಲೆಯಲ್ಲಿ ಗ್ರೀನ್ಪೀಸ್, ಫೋರ್ಡ್ ಫೌಂಡೇಶನ್ ಸೇರಿದಂತೆ ಸರಿಸುಮಾರು ಅರ್ಧದಷ್ಟು ಸಂಸ್ಥೆಗಳು ತಮ್ಮ ಪರವಾನಗಿಯನ್ನು ಕಳೆದುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.