ಬ್ಯಾಂಕಾಕ್: ಭಾರತದಿಂದ ನಿರ್ಮಿಸಲಾಗುತ್ತಿರುವ ಸಿಟ್ವೆ ಬಂದರಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಯನ್ಮಾರ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಚರ್ಚಿಸಿದರು. ಇದರೊಂದಿಗೆ ಕಲಾದನ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ ಮತ್ತು ಗಡಿ ರೇಖೆಗೆ ಸಂಬಂಧಿಸಿದ ಮಾತುಕತೆಗಳೂ ನಡೆದಿವೆ.
ಭಾನುವಾರ ಸಂಜೆ ನಡೆದ ಮಾತುಕತೆಯ ಸಂದರ್ಭದಲ್ಲಿ, ಉಭಯ ದೇಶಗಳ ನಡುವಿನ ಸಹಕಾರವನ್ನು ವಿಸ್ತರಿಸುವಿಕೆ, ಉನ್ನತ ಮಟ್ಟದ ಭೇಟಿಗಳ ವಿನಿಮಯ, ಭಾರತದಿಂದ ನಿರಂತರ ರಚನಾತ್ಮಕ ನೆರವು ಮತ್ತು ಸಾಮಾನ್ಯ ಹಿತಾಸಕ್ತಿಯ ಆಧಾರದ ಮೇಲೆ ಆಸಿಯಾನ್-ಭಾರತ ಸಹಕಾರದ ಕುರಿತು ಉಭಯ ನಾಯಕರು ಸೌಹಾರ್ದಯುತವಾಗಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದು, ವ್ಯಾಪಾರ, ಸಾರಿಗೆ, ಸಿಟ್ವೆ ಬಂದರಿನ ಕಾರ್ಯಾಚರಣೆ, ಕಲಾದನ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ ವಲಯ, ಮಯನ್ಮಾರ್ ಮತ್ತು ಭಾರತದ ನಡುವಿನ ಸಾಮಾನ್ಯ ಗಡಿಯ ಉಳಿದ ಭಾಗವನ್ನು ಗುರುತಿಸುವುದು, ಗಡಿ ಸಂಚಾರ ಒಪ್ಪಂದ, ಯಮೆಥಿನ್ನಲ್ಲಿ ಮಹಿಳಾ ಪೊಲೀಸ್ ತರಬೇತಿ ಶಾಲೆಯನ್ನು ನವೀಕರಿಸುವುದು, ಸಾರ್ವಜನಿಕ ಸೇವಕರಿಗೆ ಸಾಮರ್ಥ್ಯ ವೃದ್ಧಿ, ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದರು ಎಂದು ಮಯನ್ಮಾರಿನ ಸುದ್ದಿ ಕೇಂದ್ರವಾದ ಮಿಝಿಮಾ ಹೇಳಿದೆ.
ಭಾರತದೊಂದಿಗಿನ ಸಹಭಾಗಿತ್ವಕ್ಕೆ ತನ್ನ ಸರ್ಕಾರವು ನೀಡಿರುವ ಪ್ರಾಮುಖ್ಯತೆಯನ್ನು ಸೂಕಿ ಪುನರುಚ್ಚರಿಸಿದ್ದಾರೆ ಮತ್ತು ಪ್ರಜಾಪ್ರಭುತ್ವದ ವಿಸ್ತರಣೆ ಮತ್ತು ಮಯನ್ಮಾರಿನ ಅಭಿವೃದ್ಧಿಯನ್ನು ಗಾಢವಾಗಿಸಲು ಭಾರತದ ಸ್ಥಿರ ಮತ್ತು ನಿರಂತರ ಬೆಂಬಲವನ್ನು ಅವರು ಮೆಚ್ಚಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.