ಬಾಗಲಕೋಟೆ ನಗರದ ಕಿಲ್ಲಾ ಭಾಗದಲ್ಲಿ ಕೋಟೆ ಸುತ್ತುವ ಪರಂಪರೆ ಒಂದು ವಿಶಿಷ್ಟ ಆಚರಣೆಯಾಗಿದೆ. ಬಹುಶಃ ಕೋಟೆ(ಕ್ವಾಟಿ) ಎಂಬ ಶಬ್ದವನ್ನು ಕೇಳಿರಲಿಕ್ಕಿಲ್ಲ ಅಥವಾ ಇದರ ಮೂಲ ಅರ್ಥವನ್ನು ಗ್ರಹಿಸಲು ಸಾಧ್ಯವಾಗಿರುವುದಿಲ್ಲ.
ಕೋಟೆ ಸುತ್ತು ಹಾಕುವ ಪರಂಪರೆ ಎಷ್ಟು ವಾಸ್ತವ ಸತ್ಯವೆಂದರೆ ಕೋಟೆ ಅಂದರೆ ಕಿಲ್ಲೆ. ಈ ಆಚರಣೆ ಇರೋದು ಕಿಲ್ಲೆ(ಕಿಲ್ಲಾ)ಯಲ್ಲಿಯೆ. ಆಗಿನ ಕಾಲದಲ್ಲಿ ಈ ಕಿಲ್ಲಾ ಪ್ರದೇಶ ಒಂದು ಕಿಲ್ಲೆ(ಕೋಟೆ)ಯಾಗಿತ್ತು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಂದರೆ ಈ ಕಿಲ್ಲಾ ಪ್ರದೇಶವನ್ನು ಹಬ್ಬದ ಸಂತಸದೊಂದಿಗೆ ಸುತ್ತು ಹಾಕೋದು ಎಂದರ್ಥ. ಕೋಟೆ ಸುತ್ತು ಹಾಕುವ ಪರಂಪರೆ ಇದು ದೀಪಾವಳಿಯ ನಂತರ ಚಿಕ್ಕಮಕ್ಕಳಿಗೆ ವಿಶೇಷವಾಗಿ ಮಾಡುವ ಹಬ್ಬ.
ದೀಪಾವಳಿಯ ಪಾಡ್ಯದಂದು ಒಬ್ಬರ ಮನೆಯಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ನಂತರದ ಪಂಚಮಿಯವರೆಗೆ ಈ ವಿಶಿಷ್ಠವಾದ ಆಚರಣೆ ನಡೆಯುತ್ತದೆ. ಇದರ ಆಚರಣೆ ಎಷ್ಟು ಪುರಾತನ ಎಂಬುದು ಸ್ವಷ್ಟವಾಗಿ ಗೊತ್ತಿಲ್ಲ. ಆದರೆ ಪೇಸ್ವೆಗಳ ಆಡಳಿತದಿಂದ ಇದರ ಆಚರಣೆ ಬಂದಿರಬಹುದೆಂದು ಊಹಿಸಲಾಗುತ್ತದೆ. ಕೋಟೆ ಹಾಕೋದು ಅಂದರೆ ಪ್ರಾಯಶಃ ಹಿಂದಿನ ಕಾಲದಲ್ಲಿ ಕೋಟೆಯನ್ನು ಗೆಲ್ಲುವುದಕ್ಕೋಸ್ಕರ ರಾಜಮಹಾರಾಜರು ತುಂಬಾ ಕಷ್ಟಪಟ್ಟು ಯುದ್ದಗಳನ್ನು ಮಾಡುತ್ತಿದ್ದರು. ಕೋಟೆಗಳ ಗೆಲುವು ಪಡೆಯುದಕ್ಕಾಗಿ ಊರಿನ ತಾಯಂದಿರು, ಹಾಗೂ ಚಿಕ್ಕಮಕ್ಕಳು ಈ ಜಯಘೋಷಗಳಿಂದ ಸಕಾರಾತ್ಮಕ ವಾತಾವರಣ ನಿರ್ಮಿಸಿ ಸಮಾಜದಲ್ಲಿ ಸೌಹಾರ್ದತೆ, ಶಾಂತಿ, ಸಮೃದ್ದಿ ನೆಲೆಸಲು ಈ ತರಹದ ವಿಶಿಷ್ಟ ಪರಂಪರೆ ಆಚರಣೆಗೆ ಬಂದಿರಬಹುದು ಅನಿಸುತ್ತೆ.
ತೇತ್ರಾಯುಗದ ಶ್ರೀರಾಮ ಚಂದ್ರ ವನವಾಸವನ್ನು ಮುಗಿಸಿ ಅಯೋಧ್ಯೆಯನ್ನು ಪ್ರವೇಶ ಮಾಡುವ ಸುಸಂದರ್ಭದಲ್ಲಿ ಮನೆ ಮನೆಗಳ ಮುಂದೆ ದೀಪಗಳಿಂದ ಅಲಂಕಾರ ಮಾಡಿ, ಚಿಕ್ಕ ಮಕ್ಕಳಿಗೆ ರಾಮ, ಲಕ್ಷ್ಮಣ, ಸೀತಾಮಾತೆ ಹಾಗೂ ಹನುಮಂತನ ವೇಷ ಹಾಕಿಸಿ ಆ ಅಯೋದ್ಯೆಯನ್ನು ಸುತ್ತಿದ್ದರ ಪ್ರತೀಕವು ಈ ಕೋಟೆ ಸುತ್ತು ಹಾಕುವ ಪರಂಪರೆ ಅಷ್ಟೇಯಲ್ಲ ದ್ವಾಪರಯುಗದ ಶ್ರೀಕೃಷ್ಣ ಪರಮಾತ್ಮ ನರಕಾಸುರನ ವಧೆ ಮಾಡಿದಾಗ ನರಕ(ದುಷ್ಟ)ನ ವಧೆಯಾಯಿತು ಅಂತ ದೀಪ ಬೆಳಗಿಸಿದ್ದರ ಪ್ರತಿಕವೂ ಈ ಆಚರಣೆ ಬೆಳಕಿಗೆ ಬಂತ ಅಂತ ಹಿರಿಯ ತಲೆಗಳು ಹೇಳುತ್ತಿರುವ ಸತ್ಯಗಳು.
ಆಚರಣೆ :
ದೀಪಾವಳಿಯ ಪಾಡ್ಯದ ಶುಭದಿನದಂದು ಒಬ್ಬರ ಒಬ್ಬರ ಮನೆಯಲ್ಲಿ {ಭಾರತಿ ಕುಲಕರ್ಣಿ(ಕಟ್ಟಿ)} ಗೌರಿಯನ್ನು ಪ್ರತಿಷ್ಠಾಪಿಸಿ ಅದರ ಸುತ್ತಲೂ ಗತಕಾಲದ ವೈಭವವನ್ನು ಸಾರುವ ಪ್ರದರ್ಶಿನಿಗಳನ್ನು ಪುಟ್ಟ ಮಂಟಪದಲ್ಲಿ ತಯಾರಿಸಿ, ಜೊತೆಗೆ ಬಸವಣ್ಣನನ ಮೂರ್ತಿಯನ್ನು ಇಟ್ಟು ಅದರ ಸುತ್ತಲೂ ಕೋಟೆಯ ಆಕಾರದಲ್ಲಿ ನಿರ್ಮಿಸಿ ಆ ಕೋಟೆಯ ಸುತ್ತಲೂ ರಾಜನೆತನದ ಹಿರಿಮೆ ಗರಿಮೆಯನ್ನು ಬಿಂಬಿಸಿ ಆ ಕೋಟೆಯನ್ನು ಪ್ರಾಯೋಗಿಕವಾಗಿ ಸುತ್ತುವುದಕ್ಕೊಸ್ಕರ ಕಿಲ್ಲಾ ಓಣಿಯನ್ನು ಸುತ್ತುವ ಸಂಪ್ರದಾಯ ಅನಾದಿಕಾಲದಿಂದಲೂ ನಿರಂತರವಾಗಿ ಆಚರಣೆಯಲ್ಲಿದೆ. ಜೊತೆಗೆ ಕೋಟೆ ಸುತ್ತುವ ಮುಂಚೆ ಎಲ್ಲ ತಾಯಂದಿರು ತಮ್ಮ ಮನೆಯ ಚಿಕ್ಕ ಮಕ್ಕಳಿಗೆ ರಾಮಾಯಣ ಮಹಾಭಾರತದ ವೀರ ಮಹಾ ಪುರುಷರ ವೇಷ, ದೇಶಿಯ ಪರಂಪರೆಯ, ಸಂಸ್ಕೃತಿಯನ್ನು ಬಿಂಬಿಸುವ ವೇಷ ಹಾಕಿಸುತ್ತಾರೆ, ಈ ಕೋಟೆ ಸುತ್ತುವ ಸಮಯದಲ್ಲಿ ತಾಯಂದಿರು ದಾಸರ ಕೀರ್ತನೆಗಳನ್ನು ಹಾಡಿದರೆ, ಆ ಮಕ್ಕಳು ಕೋಲಾಟದ ಮೂಲಕ ನೋಡುಗರ ಮನಸೆಳೆಯುತ್ತಾರೆ. ಶ್ರೀಮತಿ ಭಾರತಿ ಕುಲಕರ್ಣಿ(ಕಟ್ಟಿ) ಅವರ ಮನೆಯಿಂದ ದಿನಾಲೂ ಈ ಕೋಟೆ ಸುತ್ತುವುದು ದಾಸರ ಕೀರ್ತನೆಗಳು, ಮಕ್ಕಳ ಕೋಲಾಟದಿಂದ ಪ್ರಾರಭವಾಗಿ ಶ್ರೀ ರಾಘವೇಂದ್ರ ಮಠದ ಮಾರ್ಗವಾಗಿ ಕಿಲ್ಲೆಯ ಶ್ರೀಕೊತ್ತಲೇಶನ ಸನ್ನಿಧಿಯವರೆಗೆ ಸುತ್ತಿ ಪೂಜೆ ಮಾಡಿ ಮತ್ತೇ ಕಿಲ್ಲಾ ಅರವತ್ತನೇ ಮೂಲಕ ಗೌರಿ ಪ್ರತಿಷ್ಟಾಪಿಸಿರುವ ಮನೆಗೆ ತಲುಪಿದ ನಂತರ ಅವತ್ತಿನ ಕೋಟೆ ಸುತ್ತೋದು ಮುಕ್ತಾಯವಾಗುತ್ತದೆ. ನಂತರದ ಪಂಚಮಿಯವರೆಗೂ ಇದು ನಿರಂತರವಾಗಿ ನಡೆಯುತ್ತದೆ. ರಾಮಾಯಣ ಮಹಾಭಾರತ ಕಾಲದ ಹಾಕುವ ವೇಷಗಳಂತೂ ನಿಶ್ಚಿತವಾಗಿ ಅವರೇ ಇಳಿದು ಬಂದಿದ್ದಾರೆ ಅಂತ ಅನಿಸುತ್ತೆ ಅಂದರೆ ಚಿಕ್ಕಮಕ್ಕಳಿಗೆ ಆ ವೇಷಗಳ ಅಷ್ಟು ಸರಿಯಾಗಿ ಹೊಂದಿಕೆಯಾಗಿರುತ್ತವೆ. ಹಲವಾರು ನಗರಗಳಲ್ಲಿ ಇದೆ ತರಹ ನಡೆಯುತ್ತವೆ ಅಂತ ಮಾಹಿತಿನು ಇದೆ.
ಆಶಯ :
ಸಮಾಜದಲ್ಲಿನ ಧಾರ್ಮಿಕ ಅಡಚಣೆಗಳನ್ನು ಸರಿಪಡಿಸಿ ಪ್ರತಿಯೊಬ್ಬರೂ ಸನಾತನ ಸಂಸ್ಕೃತಿಯ ಪಾಲುದಾರರಾಗಿ ಬಿಂಬಿಸುವುದು ಅವಶ್ಯವಾಗಿದೆ. ಸ್ವದೇಶಿ ಸಂಸ್ಕೃತಿಯನ್ನು ಆಚರಿಸುವುದರ ಮೂಲಕ ಮನೆ ಮನಗಳಲ್ಲಿ ಅಡಗಿಕೊಳ್ಳುತ್ತಿರುವ ವಿದೇಶಿ ಸಂಸ್ಕೃತಿಯನ್ನು ಹೊಡೆದೊಡಿಸಿ ನಮ್ಮ ಪರಂಪರೆಯ ಪುನರ್ಪ್ರತಿಷ್ಠಾಪಿಸಿ ಅದರಂತೆ ನಡೆಯುದು ಇದರ ಮೂಲ ಉದ್ದೇಶವಾಗಿದೆ. ಚಟಗಳ ದಾಸ್ಯಕ್ಕೆ ಬಲಿಯಾಗುತ್ತಿರುವ ಯುವ ಸಮುದಾಯವನ್ನು ಚಿಕ್ಕ ಮಕ್ಕಳಿದ್ದಾಗಲೆ ಈ ತರಹದ ಆಚರಣೆಯ ಮೂಲಕ ಒಳ್ಳೆಯ ದಾರಿಗೆ ತರುವುದು ಇದರ ಆಶಯಗಳಲ್ಲೊಂದು.
ಈ ತರಹ ಪರಂಪರೆಗಳು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವುದಲ್ಲದೆ. ರಾಷ್ಟ್ರೀಯತ್ವವನ್ನು ಮತ್ತಷ್ಟು ಜಾಗೃತಗೊಳಿಸುವಲ್ಲಿ ಈ ತರಹದ ಆಚರಣೆಗಳು ನಮ್ಮ ಮದ್ಯೆವೇ ಇದ್ದು ತೆರೆಯ ಮರೆಯ ಕಾಯಿಯಂತೆ ಹಿಂದುತ್ವದ ಜೀವಾಳವಾದ ಹಿಂದು ಸಂಸ್ಕೃತಿಯನ್ನು ಬೆಳೆಸುತ್ತಿವೆ.
ಮುಖ್ಯವಾಗಿ ಹಿಂದು ಸಮಾಜದ ಸನಾತನ ಸಂಸ್ಕೃತಿಯನ್ನು ಆಚರಿಸಿ ಬೆಳೆಸುವುದು ಅಷ್ಟೇಯಲ್ಲ, ಚಿಕ್ಕಮಕ್ಕಳಲ್ಲಿ ರಾಷ್ಟ್ರಮೂಲ ಮಹಾ ಪುರುಷರ ಗುಣ, ವಿಚಾರ ಬೆಳೆಸುವುದು, ದಾಸರ ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಾಮರಸ್ಯ, ಸಮಾನತೆಯೊಂದಿಗೆ ನಾವೆಲ್ಲ ಒಂದು ನಾವೆಲ್ಲ ಹಿಂದು ಎನ್ನುವ ಮೂಲ ಕಲ್ಪನೆಯೂ ಇದರಲ್ಲಿ ಅಡಗಿರೋದು ಸುಳ್ಳಲ್ಲ. ಹಿಂದು ಸಮಾಜವನ್ನು ಜಾಗೃತಿ ಮಾಡುವುದು ಇದರ ಉದ್ದೇಶಗಳಲ್ಲೊಂದು. ನೋಡುಗರಿಗೆ ಮಕ್ಕಳ ಕೋಲಾಟ ಕಣ್ಣು ತಣಿಸಿದರೆ, ದಾಸರ ಕೀರ್ತನೆಗಳು ಮನ ತಣ್ಣಿಸಿ ಆ ಪದಗಳ ಸಾಲಿನಂತೆ ಹಾಗೂ ಆ ಮಹಾಪುರುಷರ ಜೀವನದಂತೆ ಬದುಕಬೇಕು ಅನಿಸುತ್ತದೆ.
ಹಿರಿಯರು ಹಾಕಿಕೊಂಡು ಬಂದಿರುವ ಯಾವುದೇ ಆಚರಣೆಗಳೂ ಯಾವುದೇ ಬೇಧ ಭಾವ ಮಾಡದೇ ಅಖಂಡ ಹಿಂದು ಸಮಾಜವನ್ನು ಒಗ್ಗೂಡಿಸಿ ಸಮೃದ್ಧ, ಸುಸಂಸ್ಕೃತ ಸಮಾಜವನ್ನು ನಿರ್ಮಿಸಿ ಎಲ್ಲರೂ ಸಮಾನರಾಗಿ ಬದುಕಿ ರಾಷ್ಟ್ರ ಮಹಾಪುರುಷರ ಜೀವನ ಘಟನೆಗಳನ್ನು ನಮ್ಮ ಮನೆಯವರೂ ಮೈಗೂಸಿಕೊಳ್ಳಲಿ ಎಂದ ಈ ತರಹದ ಆಚರಣೆಗಳು ಬಂದಿವೆ, ಏನೇ ಆಗಲಿ ಈ ಪುರಾತನ ಆಚರಣೆಗಳನ್ನು ಆಚರಿಸುತ್ತಾ ದೇಶಕ್ಕೆ, ಧರ್ಮಕ್ಕೆ ಯಾವುದೇ ತೊಂದರೆಯಾಗದಂತೆ ನಮ್ಮನ್ನು ನಾವು ರಾಷ್ಟ್ರ ಕಾರ್ಯದಲಿ ಸಮರ್ಪಿಸಿಕೊಳ್ಳೋಣ.
ಭಾರತ ಮಾತಾ ಕೀ ಜಯ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.