ನೀರಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಲೇ ಬೇಕು. ಕೈಗಾರಿಕೆಗಳಲ್ಲಿ, ಮನೆಗಳಲ್ಲಿ ನಿತ್ಯ ಲಕ್ಷಗಟ್ಟಲೆ ಲೀಟರ್ ನೀರುಗಳು ಪೋಲಾಗುತ್ತವೆ. ಇದನ್ನು ತಡೆಗಟ್ಟುವ ದಾರಿಯನ್ನು ಹುಡುಕುವುದು ಇಂದಿನ ಅವಿವಾರ್ಯತೆಯಾಗಿದೆ.
ಬೆಂಗಳೂರು ಮೂಲದ FluxGen ಟೆಕ್ನಾಲಜೀಸ್ ನೀರಿನ ಸಂರಕ್ಷಣೆಯ ವಿಷಯದಲ್ಲಿ ದಾಪುಗಾಲನ್ನಿಟ್ಟಿದೆ. ವಿವಿಧ ಕೈಗಾರಿಕೆಗಳಿಗೆ ನೀರಿನ ಮೇಲ್ವಿಚಾರಣೆ ಪರಿಹಾರಗಳನ್ನು ಅದು ಒದಗಿಸುತ್ತಿದೆ. 36 ವರ್ಷದ ಗಣೇಶ್ ಶಂಕರ್ ಈ ಸ್ಟಾರ್ಟ್ಅಪ್ ರೂವಾರಿಯಾಗಿದ್ದಾರೆ. 2016ರಲ್ಲಿ ಇದು AquaGen ಎಂಬ ನೀರಿನ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಪ್ರಸ್ತುತ, ಆಹಾರ ಸಂಸ್ಕರಣಾ ಘಟಕಗಳು, ಉತ್ಪಾದನಾ ಘಟಕಗಳು ಮತ್ತು ಕೈಗಾರಿಕಾ ಪಟ್ಟಣಗಳಂತಹ 20ಕ್ಕೂ ಅಧಿಕ ಕೈಗಾರಿಕಾ ಘಟಕಗಳು ತಮ್ಮ ನೀರಿನ ಬಳಕೆ, ಸೋರಿಕೆ ಮತ್ತು ಅತಿಯಾದ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ವಿಶ್ಲೇಷಿಸಲು AquaGen ಅನ್ನು ಬಳಸುತ್ತಿವೆ. 2016 ರಿಂದ ಪ್ರಾರಂಭವಾದ ಇದು, ಇದುವರೆಗೆ ಸುಮಾರು ಒಂದು ಶತಕೋಟಿ ಲೀಟರ್ ನೀರನ್ನು ಸಂರಕ್ಷಿಸಿದೆ.
AquaGen ಅನ್ನು ಬಳಸುತ್ತಿರುವ ಪಾಂಡಿಚೆರಿಯ ವಿನ್ನರ್ ಡೈರಿಯಲ್ಲಿ ನಿರ್ವಹಣಾ ಉಸ್ತುವಾರಿಯಾಗಿರುವ ಸಿ ಅಯ್ಯನಾರ್ ಅವರು AquaGen ನಮ್ಮ ಡೈರಿಯಲ್ಲಿ ಸಾವಿರಾರು ಲೀಟರ್ ನೀರನ್ನು ಸಂರಕ್ಷಣೆ ಮಾಡಿದೆ ಎನ್ನುತ್ತಾರೆ.
“ಡೈರಿ ಉದ್ಯಮದಲ್ಲಿ, ಕ್ಲೀನಿಂಗ್-ಇನ್-ಪ್ಲೇಸ್ (ಸಿಐಪಿ) ಒಂದು ಅವಿಭಾಜ್ಯ ಪ್ರಕ್ರಿಯೆಯಾಗಿದ್ದು, ಇದಕ್ಕೆ ಸಾಕಷ್ಟು ನೀರಿನ ಅಗತ್ಯವಿರುತ್ತದೆ, ಮತ್ತು ನಾವು ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ ಈ ವಿಧಾನವನ್ನು ಪುನರಾವರ್ತಿಸುತ್ತೇವೆ. ಈ ಪ್ರಕ್ರಿಯೆಯು ಸಿಐಪಿ ಯಂತ್ರಗಳ ಮೂಲಕ ಅಂತರ್ ನಿರ್ಮಿತ ಬಟರ್ಫ್ಯಾಟ್ ಅಥವಾ ಪ್ರೋಟೀನ್ ಅನ್ನು ತೆಗೆದುಹಾಕುತ್ತದೆ ಮತ್ತು ಅವುಗಳನ್ನು ಸ್ವಚ್ಛಗೊಳಿಸುತ್ತದೆ. ಒಂದು ದಿನಕ್ಕಾಗಿ ಸಿಐಪಿ ನಡೆಸಲು ಡೈರಿಯು ಸರಾಸರಿ 90,000 ಲೀಟರ್ ಅನ್ನು ಬಳಕೆ ಮಾಡುತ್ತದೆ. ಹೀಗಾಗಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ಎಂಟು ತಿಂಗಳ ಹಿಂದೆ ಫ್ಲಕ್ಸ್ಜೆನ್ ಸಂಸ್ಥೆಯ AquaGen ಅನ್ನು ಅಳವಡಿಸಲು ನಿರ್ಧರಿಸಿದೆವು. AquaGen ಅನ್ನು ಅಳವಡಿಸಿದ ನೀರಿನ ನಂತರ, ನಾವು ದಿನದಲ್ಲಿ 30,000 ಲೀಟರ್ ಬಳಕೆಯನ್ನು ಕಡಿತಗೊಳಿಸಿದ್ದೇವೆ. ನಮ್ಮ ವಿದ್ಯುತ್ ವೆಚ್ಚವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಲು ಇದರಿಂದ ಸಾಧ್ಯವಾಗಿದೆ. ನಮ್ಮ ಬಳಕೆಯ ಮಾದರಿಗಳನ್ನು ನಾವು ಪ್ರತಿದಿನ ಮೇಲ್ವಿಚಾರಣೆ ಮಾಡುವುದರಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ” ಎಂದು ಸಿ ಅಯ್ಯನಾರ್ ಹೇಳುತ್ತಾರೆ.
ಗಣೇಶ್ ಅವರು ಹೇಳುವಂತೆ, ಟೈಟಾನ್ ಜ್ಯುವೆಲ್ಲರಿ ಡಿವಿಷನ್ (ತನಿಷ್ಕ್) ಪ್ರಾಜೆಕ್ಟ್ 2016ಲ್ಲಿ AquaGen ಜನನಕ್ಕೆ ಕಾರಣವಾಗಿದೆ. “ಪ್ರತಿ ಐದು ನಿಮಿಷಗಳಿಗೊಮ್ಮೆ ನಮ್ಮ ನೀರಿನ ಬಳಕೆಯನ್ನು ಮೇಳ್ವಿಚಾರಣೆ ಮಾಡುವಂತಹ ಸೊಲ್ಯೂಷನ್ ಅನ್ನು ಅಭಿವೃದ್ಧಿಪಡಿಸುವಂತೆ ತನಿಷ್ಕ್ ನಮಗೆ ತಿಳಿಸಿತ್ತು, ಅಂತಹ ಸೊಲ್ಯೂಷನ್ ಅಭಿವೃದ್ಧಿಪಡಿಸಲು ನಮಗೆ ಸುಮಾರು ಆರು ತಿಂಗಳುಗಳು ಬೇಕಾದವು ಎಂದು” ಎಂದು ಹೇಳುತ್ತಾರೆ.
ತಂತ್ರಜ್ಞಾನದ ಇತರ ವೈಶಿಷ್ಟ್ಯಗಳ ಜೊತೆಗೆ, ನೀರಿನ ಮೀಟರ್ ರೀಡಿಂಗ್ ಅನ್ನು ಮ್ಯಾನ್ವಲ್ ಆಗಿ ಮೇಲ್ವಿಚಾರಣೆ ಮಾಡುವ ಅಗತ್ಯವನ್ನು AquaGen ತೆಗೆದುಹಾಕಿದೆ.
ನೀರಿನ ಪಂಪ್ ಮತ್ತು ಮರುಬಳಕೆ ಉಪಕರಣಗಳು ಬಳಸುವ ನೈಜ-ಸಮಯದ ಹರಿವು, ಮಟ್ಟ, ಒತ್ತಡ ಮತ್ತು ಶಕ್ತಿಯನ್ನು ಮೇಲ್ವಿಚಾರಣೆ ಮಾಡಲು ಫ್ಲಕ್ಸ್ಜೆನ್ನ ಸಾಧನವು ಸಹಾಯ ಮಾಡುತ್ತದೆ. ಆಕ್ವಾಜೆನ್ನ ಕೇಂದ್ರಭಾಗದಲ್ಲಿರುವ ಎಐ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಟೆಕ್ನಾಲಜಿ (ಐಒಟಿ) ಯೊಂದಿಗೆ, ನಾವು ಯಂತ್ರ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಅದರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಬಹುದು.
“ಟೆಕ್ ಸ್ಟ್ಯಾಕ್ ಅನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ, ಇದರಲ್ಲಿ ಐಒಟಿ ಮಾಡ್ಯೂಲ್ಗಳು, ಕ್ಲೌಡ್ ಸಾಫ್ಟ್ವೇರ್, ವೆಬ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್, ಯಂತ್ರ ಕಲಿಕೆ ಕ್ರಮಾವಳಿಗಳು ಸೇರಿವೆ. ನಾವು ನೀರಿನ ಹರಿವಿನ ಮೀಟರ್, ನೀರಿನ ಮಟ್ಟದ ಸಂವೇದಕಗಳು ಮತ್ತು ಇತರ ಸಂವೇದಕಗಳನ್ನು ಮೂರನೇ ವ್ಯಕ್ತಿಯಿಂದ ಸಂಗ್ರಹಿಸುತ್ತೇವೆ ”ಎಂದು ಗಣೇಶ್ ವಿವರಿಸುತ್ತಾರೆ.
ಈ ಸೊಲ್ಯೂಷನ್ ವೆಚ್ಚವು ಗ್ರಾಹಕರ ಅವಶ್ಯಕತೆಗಳಾದ ನೀರಿನ ಪೈಪಿನ ವ್ಯಾಸ, ಟ್ಯಾಂಕ್ ಗಾತ್ರ, ಬಳಕೆಯ ಪಾಯಿಂಟ್ಗಳ ಸಂಖ್ಯೆ ಮತ್ತು ಶೇಖರಣಾ ಪಾಯಿಂಟ್ಗಳ ಮೇಲೆ ಅವಲಂಬಿತವಾಗಿರುತ್ತದೆ.
2003 ರಲ್ಲಿ, ಬೆಂಗಳೂರಿನ ಆರ್ವಿ ಕಾಲೇಜ್ ಆಫ್ ಎಂಜಿನಿಯರಿಂಗ್ನಿಂದ ಟೆಲಿಕಮ್ಯೂನಿಕೇಶನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆಯುತ್ತಿದ್ದಾಗ ಗಣೇಶ್ ಒಂದು ಸಣ್ಣ ಕೋಚಿಂಗ್ ಸೆಂಟರ್ ಅನ್ನು ಪ್ರಾರಂಭಿಸಿದರು. ಅಲ್ಲಿ ಅವರು ಸುಮಾರು 100 ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್ ಸರ್ಕ್ಯೂಟ್ಗಳನ್ನು ಕಲಿಸಿದ್ದಾರೆ. ಕಾಲೇಜು ನಂತರ ಅವರು ನೆಕ್ಸ್ಟ್ ಫರ್ಸ್ಟ್ ಎಂಜಿನಿಯರಿಂಗ್ ಟೆಕ್ನಾಲಜೀಸ್ಗೆ ಸೇರಿದರು, ಅಲ್ಲಿ ಅವರು ಸಾಧನಗಳು ಮತ್ತು ವ್ಯವಸ್ಥೆಗಳನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಕಲಿತರು.
2006ರಲ್ಲಿ, ಅವರು ಅಯಾನ್-ಟ್ರ್ಯಾಪ್ ಮಾಸ್ ಸ್ಪೆಕ್ಟ್ರೋಮೀಟರ್ನಲ್ಲಿ ಸಂಶೋಧನೆ ನಡೆಸಲು ಐಐಎಸ್ಸಿಗೆ ಸೇರಿದರು. 2008 ರಲ್ಲಿ, ಅವರು ಅಮೆರಿಕದ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯಾದ ಜನರಲ್ ಎಲೆಕ್ಟ್ರಿಕ್ ಕಂಪನಿ (ಜಿಇ) ಯೊಂದಿಗೆ ಕೆಲಸ ಮಾಡಿದರು. ಎರಡು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ನಂತರ ಅವರು ಅದಕ್ಕೆ ರಾಜೀನಾಮೆಯನ್ನು ನೀಡಿದ ಸಾಮಾನ್ಯ ಜನರಿಗೆ ಪರಿಸರ ಸ್ನೇಹಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮುಂದಾದರು. ಅದರ ಫಲವಾಗಿಯೇ ಸ್ಟಾರ್ಟ್ಅಪ್ FluxGen ಟೆಕ್ನಾಲಜೀಸ್ ಅನ್ನು ಸ್ಥಾಪನೆ ಮಾಡಿದರು, ಅದರ ಮೂಲಕ AquaGen ಅನ್ನು ಅಭಿವೃದ್ಧಿಪಡಿಸಿದರು. ಇಂದು AquaGen ಕೈಗಾರಿಕೆಗಳ ನೀರಿನ ಸಂರಕ್ಷಣೆಯಲ್ಲಿ ಬಹುಮುಖ್ಯ ಪಾತ್ರವನ್ನು ನಿಭಾಯಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.