ನವದೆಹಲಿ: ಈಗಾಗಲೇ ಜಾಹೀರಾತಿಗಾಗಿ ರೂ. 526 ಕೋಟಿ ವ್ಯಯಿಸಿ ಭಾರೀ ಟೀಕೆಗೆ ಒಳಗಾಗಿರುವ ಎಎಪಿ ಪಕ್ಷ ಇದೀಗ ಕೇಂದ್ರವನ್ನು ಟೀಕಿಸುವ ಮತ್ತೊಂದು ಟಿವಿ ಜಾಹೀರಾತನ್ನು ಹೊರತಂದಿದೆ.
‘ಅವರು ತೊಂದರೆ ಕೊಡುತ್ತಾ ಇರಲಿ, ನಾವು ಕೆಲಸ ಮಾಡುತ್ತಾ ಇರೋಣ (Wo pareshaan karte rahein, hum kaam karte rahein)’ ಎಂಬ ಟ್ಯಾಗ್ಲೈನ್ ನೀಡಿ ಜಾಹೀರಾತು ಮಾಡಲಾಗಿದೆ. ಕೇಂದ್ರಕ್ಕೆ ಟಾಂಗ್ ನೀಡುವ ಉದ್ದೇಶದಿಂದ ಈ ಟ್ಯಾಗ್ಲೈನ್ ನೀಡಲಾಗಿದೆ. ಜಾಹೀರಾತಿನಲ್ಲಿ ಅರವಿಂದ್ ಕೇಜ್ರಿವಾಲ್ ಮಾಡಿದ ಸಾಧನೆಗಳನ್ನು ಬಿಂಬಿಸಲಾಗಿದೆ.
1.27 ನಿಮಿಷದ ಈ ವಿಡಿಯೋವನ್ನು ದೇಶದ ಪ್ರತಿಷ್ಠಿತ ಟಿವಿ ಚಾನೆಲ್ಗಳಲ್ಲಿ ಹಲವಾರು ಬಾರಿ ಪ್ರಸಾರ ಮಾಡಲಾಗುತ್ತಿದೆ.
ಜಾಹೀರಾತಿಗೆ ರೂ. 526 ಕೋಟಿ ವ್ಯಯ ಮಾಡಿ ಕಾಂಗ್ರೆಸ್, ಬಿಜೆಪಿ ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗುತ್ತಿರುವ ವೇಳೆಯಲ್ಲಿಯೇ ಈ ಜಾಹೀರಾತು ಹೊರ ತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.