ಪ್ಯಾರೀಸ್ : ಅಕ್ಟೋಬರ್ 31 ರಂದು ಫ್ರಾನ್ಸಿನಲ್ಲಿ “ಇನ್-ಫ್ರಾ” ಸಂಘಟನೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ “ಏಕತಾ ದಿನ”ವನ್ನು ಆಚರಿಸಿತು. ಫ್ರಾನ್ಸ್ನಲ್ಲೂ
ಫ್ರಾನ್ಸ್ನಲ್ಲಿನ ಭಾರತದ ರಾಯಭಾರ ಕಚೇರಿಯು ಈ ಬಗ್ಗೆ ಟ್ವೀಟ್ ಮಾಡಿದ್ದು, “ಭಾರತೀಯ ರಾಯಭಾರ ಕಚೇರಿಯ ಪ್ರೋತ್ಸಾಹದೊಂದಿಗೆ ಏಕತಾ ದಿನವನ್ನು “ಇನ್-ಫ್ರಾ” ಸಂಘಟನೆಯು ಸರ್ದಾರ್ ವಲ್ಲಭಭಾಯ್ ಅವರ 144 ಜನ್ಮ ದಿನಾಚರಣೆಯ ಪ್ರಯುಕ್ತ ಆಚರಿಸಿತು. ಈ ಸಂದರ್ಭದಲ್ಲಿ ಯೋಗ ಕಾರ್ಯಕ್ರಮ ಜರುಗಿತು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತುಣುಕುಗಳನ್ನು ಪ್ರಸಾರಗೊಳಿಸಲಾಯಿತು. ಭಾರತೀಯ ರಾಯಭಾರ ಕಚೇರಿಯ ಅರುಲಾನಂಡು ಅವರು ಭಾಗವಹಿಸಿದ್ದರು” ಎಂದಿದೆ.
ಭಾರತದಲ್ಲಿ, ಸರ್ದಾರ್ ಪಟೇಲ್ ಅವರ 144 ನೇ ಜನ್ಮ ದಿನಾಚರಣೆಯನ್ನು ಸಾಕಷ್ಟು ಅಭಿಮಾನದಿಂದ ಆಚರಿಸಲಾಯಿತು. ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು. ದೇಶದಾದ್ಯಂತ ಏಕತಾ ಓಟವನ್ನು ಆಯೋಜನೆಗೊಳಿಸಲಾಗಿತ್ತು.
ರಾಜಧಾನಿ ದೆಹಲಿಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ರನ್ ಫಾರ್ ಯೂನಿಟಿ’ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು. ಏಕತಾ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.