ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸಲು ಅತ್ಯವಶ್ಯಕವಾದ ನಿಪುಣ ಕಾರ್ಯಪಡೆಯನ್ನು ಸೃಷ್ಟಿಸಲು ಸರ್ಕಾರ ‘ನ್ಯಾಷನಲ್ ಸ್ಕಿಲ್ ಮಿಶನ್’ನನ್ನು ಜಾರಿಗೆ ತರುತ್ತಿದೆ. ಕೌಶಲ್ಯ ಹೊಂದಿದ ಸಮರ್ಥ ಯುವ ಸಮೂಹವನ್ನು ಸೃಷ್ಟಿಸುವುದು ಈ ಯೋಜನೆಯ ಮೂಲ ಆಶಯ.
ಜುಲೈ 15 ರಂದು ಪ್ರತಿವರ್ಷ ‘ವರ್ಲ್ಡ್ ಯೂತ್ ಸ್ಕಿಲ್ ಡೇ’ಯನ್ನು ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತಿದೆ. ಇದೇ ದಿನದಂದು ನರೇಂದ್ರ ಮೋದಿ ಸರ್ಕಾರ ’ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಮಿಶನ್’ಗೆ ಚಾಲನೆ ನೀಡಲಿದೆ.
ಭಾರತದ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮದ ಅಭಿವೃದ್ಧಿಗಾಗಿ ರಾಷ್ಟ್ರೀಯ ನಿಮಯಗಳನ್ನು ಈ ಯೋಜನೆ ರೂಪಿಸಲಿದೆ. ಕೌಶಲ್ಯಾಭಿವೃದ್ಧಿ ತರಬೇತಿ, ಕೌಶಲ್ಯ ಆಧುನೀಕರಣ, ಇನ್ ಸರ್ವಿಸ್ ಟ್ರೈನಿಂಗ್ಗಳನ್ನು ನೀಡಲಾಗುತ್ತದೆ. ಕೌಶಲ್ಯರಹಿತವಾದ ಶೇ.೮೦ರಷ್ಟು ಕಾರ್ಯಪಡೆಯನ್ನು ತರಬೇತಿಯ ಮೂಲಕ ನೈಪುಣ್ಯತೆ ಸಾಧಿಸುವಂತೆ ಮಾಡುವ ಗುರಿಯನ್ನೂ ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.