ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಜನತೆಗೂ ಶುಭಕಾಮನೆಗಳು. ಬೆಳಕಿನ ಈ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲೂ ಬೆಳಕನ್ನು ತರಲಿ, ನಮ್ಮ ದೇಶವು ಸದಾ ಸಂತೋಷ, ಸಮೃದ್ಧಿ ಮತ್ತು ಅದೃಷ್ಟದ ಜ್ಯೋತಿಯೊಂದಿಗೆ ಬೆಳಗಲಿ” ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ ಸಹಿಯುಳ್ಳ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೀಪಾವಳಿ ಹಬ್ಬವು ಎಲ್ಲರ ಬದುಕಿನಲ್ಲೂ ಸಮೃದ್ಧಿ ಮತ್ತು ಒಳ್ಳೆಯ ಆರೋಗ್ಯವನ್ನು, ಸಂತೋಷವನ್ನು ತರಲಿ ಎಂದಿದ್ದಾರೆ.
देशवासियों को दीपावली के पावन अवसर पर बहुत-बहुत शुभकामनाएं। रोशनी का यह उत्सव हम सभी के जीवन में नया प्रकाश लेकर आए और हमारा देश सदा सुख, समृद्धि और सौभाग्य से आलोकित रहे।
Wishing you all a Happy #Diwali. pic.twitter.com/5nhimk58CO
— Narendra Modi (@narendramodi) October 27, 2019
ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ದೇಶದ ಜನತೆಗೆ ದೀಪಾವಳಿ ಶುಭಾಶಯವನ್ನು ತಿಳಿಸಿದ್ದು, ಅಗತ್ಯವುಳ್ಳ ವರ ಬದುಕಿನಲ್ಲಿ ಪ್ರೀತಿ, ಕಾಳಜಿಯನ್ನು ತೋರಿಸುವ ಮೂಲಕ ದೀಪಾವಳಿಯನ್ನು ಆಚರಿಸೋಣ ಎಂದಿದ್ದಾರೆ.
“ದೀಪಾವಳಿಯ ಪವಿತ್ರದಿನದಂದು ದೇಶದ ಎಲ್ಲಾ ನಿವಾಸಿಗಳಿಗೆ ಶುಭಾಶಯಗಳು. ಅಗತ್ಯ ಉಳ್ಳವರ ಬದುಕಿನಲ್ಲಿ ಸಂತೋಷವನ್ನು ತರುವ ಮೂಲಕ ಬೆಳಕಿನ ಹಬ್ಬವನ್ನು ಆಚರಿಸೋಣ. ಪ್ರೀತಿ ಕಾಳಜಿಯ, ಹಂಚಿಕೊಂಡು ತಿನ್ನುವ ದೀಪವನ್ನು ಉರಿಸೋಣ” ಎಂದಿದ್ದಾರೆ.
ದೇಶದಾದ್ಯಂತ ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮಾಚರಣೆ ನಡೆಯಲಿದ್ದು, ಮಂಗಳವಾರ ಕೊನೆಗೊಳ್ಳಲಿದೆ.
Greetings and best wishes to fellow citizens on the auspicious occasion of Deepawali.
Let us on this day try to bring happiness in the lives of those who are less fortunate and needy by lighting the lamp of love, care and sharing #PresidentKovind
— President of India (@rashtrapatibhvn) October 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.