ಶ್ರೀನಗರ : ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆ ಅತ್ಯಂತ ಯಶಸ್ವಿಯಾಗಿದೆ. ಗುರುವಾರ ಅಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆ ಅಲ್ಲಿ ನಡೆದಿದ್ದು, ಶೇ.98.3ರಷ್ಟು ಮತದಾನವಾಗಿದೆ.
ಎಲ್ಲಾ ಕಡೆಯೂ ಚುನಾವಣೆ ಅತ್ಯಂತ ಯಶಸ್ವಿಯಾಗಿ ಶಾಂತಿಯುತವಾಗಿ ನಡೆದಿದೆ.
ಶ್ರೀನಗರದಲ್ಲಿ ಶೇ.100 ರಷ್ಟು ಮತದಾನವಾಗಿದೆ. ಪುಲ್ವಾಮ ಮತ್ತು ಶೋಪಿಯಾನದಲ್ಲಿ ಕ್ರಮವಾಗಿ ಶೇ. 86 ಮತ್ತು ಶೇ. 85 ರಷ್ಟು ಮತದಾನವಾಗಿದೆ. ಇಡೀ ರಾಜ್ಯದಲ್ಲಿ ಆದ ಮತದಾನದ ಪ್ರಮಾಣ ಶೇ. 98.3.
ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಎನ್ಸಿ ಮತ್ತು ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತದಾನವನ್ನು ಬಹಿಷ್ಕರಿಸಿದ್ದವು.
ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ಶೇ. 9 8ಕ್ಕೂ ಅಧಿಕ ಮತದಾನ ನಡೆದಿದ್ದು ಮಹತ್ವದ ಬೆಳವಣಿಗೆಯಾಗಿದೆ. ಆ ರಾಜ್ಯ ನಿಧಾನಗತಿಯಲ್ಲಿ ಮುಖ್ಯ ವಾಹಿನಿಗೆ ಮರಳುತ್ತಿದೆ ಎಂಬುದರ ದ್ಯೋತಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.