ನವದೆಹಲಿ: ಭಾರತೀಯ ರೈಲ್ವೇಯನ್ನು ಆಧುನೀಕರಣಗೊಳಿಸುವತ್ತ ನರೇಂದ್ರ ಮೋದಿ ಸರಕಾರ ದಾಪುಗಾಲಿಡುತ್ತಿದೆ. ಭಾರತೀಯ ರೈಲ್ವೆಯು ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ರೈಲುಗಳಲ್ಲಿ ವೈ-ಫೈ ಸೇವೆ ದೊರಕುವಂತೆ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೇ, ರೈಲುಗಳನ್ನು ಓಡಿಸುವುದು ಸೇರಿದಂತೆ ರೈಲಿಗೆ ಸಂಬಂಧಿಸಿದ ಹೆಚ್ಚಿನ ಕಾರ್ಯಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಡೆಸಲು ಬಯಸುತ್ತಿದೆ.
ಈ ಬಗ್ಗೆ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಮಾಹಿತಿಯನ್ನು ನೀಡಿದ್ದು, “2020 ರ ವೇಳೆಗೆ 6,500 ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ನೀಡಲು ಗುರಿ ಹೊಂದಲಾಗಿದೆ, ವೈ-ಫೈ ಈಗಾಗಲೇ ಭಾರತದ 5,200 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ತಲುಪಿದೆ. TKhe ಆಪ್ಟಿಕ್ ಫೈಬರ್ ಕೇಬಲ್ ತಲುಪಿಲ್ಲದ ಕಾರಣದಿಂದಾಗಿ ಅಥವಾ ಪರಿಸರ ವ್ಯವಸ್ಥೆಯ ಕಾರಣದಿಂದಾಗಿ ತಾಂತ್ರಿಕ ಸವಾಲುಗಳಿಂದಾಗಿ ಇನ್ನೂ 1,000 ನಿಲ್ದಾಣಗಳು ವೈಫೈಗೆ ಸಂಪರ್ಕಿತವಾಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಲಿದೆ. ಮುಂದಿನ ಆರು-ಎಂಟು ತಿಂಗಳುಗಗಳೊಳಗೆ ಇಲ್ಲಿ ವೈಫೈ ಸಂಪರ್ಕವಾಗುವ ನಿರೀಕ್ಷೆ ಇದೆ” ಎಂದಿದ್ದಾರೆ.
ಮುಂದಿನ ನಾಲ್ಕು ವರ್ಷದಲ್ಲಿ ಎಲ್ಲಾ ಪ್ರಯಾಣಿಕ ರೈಲುಗಳಲ್ಲೂ ವೈಪೈ ಸಂಪರ್ಕ ಇರಲಿದೆ, ಇದರಿಂದಾಗಿ ರೈಲಿನ ಎಲ್ಲಾ ಪ್ರಯಾಣಿಕರಿಗೂ ವೈಫೈ ಸೇವೆ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಮೋದಿ ಸರ್ಕಾರ ರೈಲ್ವೇಯನ್ನು ಉನ್ನತೀಕರಿಸುವ ಸಲುವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅದರ ಭಾಗವಾಗಿ ರೈಲ್ವೇ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಸಿಸಿ ಕ್ಯಾಮೆರಾಗಳನ್ನು, ವೈಫೈಗಳನ್ನು ಅಳವಡಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.