ಹುಬ್ಬಳ್ಳಿ: ದೇಶಕ್ಕೆ ಮಾದರಿಯಾಗಿರುವ ರಾಜ್ಯದ ಏಕೀಕೃತ ಆನ್ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಇಲ್ಲಿನ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉದ್ಘಾಟನೆಗೊಳ್ಳಲಿದೆ.
ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಜು. 10ರಂದು ಉದ್ಘಾಟಿಸಲಿದ್ದು, ಇದನ್ನು ದೇಶದ ಇನ್ನಿತರ ಭಾಗಗಳಲ್ಲೂ ಜಾರಿಗೊಳಿಸುವ ಚಿಂತನೆ ನಡೆಸಿದೆ. ಈ ಕಾರ್ಯಕ್ರಮದಲ್ಲಿ ದೇಶದ ಇತರ 26 ರಾಜ್ಯಗಳ ಕೃಷಿ ಸಚಿವರು, ಮೂವರು ಕೇಂದ್ರಾಡಳಿತ ಪ್ರದೇಶ ಮತ್ತು ರಾಷ್ಟ್ರಮಟ್ಟದ ಮೂವರು ಪ್ರತಿನಿಧಿಗಳು ಆಗಮಿಸಲಿದ್ದಾರೆ.
ಏಕೀಕೃತ ಆನ್ಲೈನ್ ವ್ಯವಸ್ಥೆ ಕುರಿತು ನಗರದ ಡೆನಿಸನ್ ಹೋಟೆಲ್ನಲ್ಲಿ ಗುರುವಾರ ಸಂಜೆ ಕಾರ್ಯಾಗಾರ ನಡೆಯಲಿದೆ.
ಈ ವ್ಯವಸ್ಥೆ ರೈತರಿಗೆ ಸಹಾಯಕವಾಗಲಿದೆ. ರೈತರು ತಮ್ಮ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಯನ್ನು ಎಪಿಎಂಸಿಗೆ ನೀಡುವ ಮೂಲಕ ಹೆಸರು ನೋಂದಾಯಿಸಬಹುದು. ಟೆಂಡರ್ ಖರೀದಿದಾರರು ಫಸಲಿನ ಹಣವನ್ನು ಎಪಿಎಂಸಿ ಮುಖ್ಯ ಖಾತೆಗೆ ಪಾವತಿಸಬೇಕು. ಎಪಿಎಂಸಿ ತನ್ನ ಪೇ ಇನ್, ಹವಾಲಿ ಹಣ, ದಲ್ಲಾಳಿಗಳ ಕಮಿಷನ್ ಪಡೆದು ಉಳಿದ ಹಣವನ್ನು ನೀಡುತ್ತದೆ.
ಹೆಸರು ನೋಂದಾಯಿಸಿದ ರೈತರು ಟೆಂಡರ್, ಎಪಿಎಂಸಿ ದರಗಳ ಮಾಹಿತಿಯನ್ನು ಮೊಬೈಲ್ ಸಂದೇಶದ ಮೂಲಕ ಪಡೆಯಬಹುದಾಗಿದೆ. ಆನ್ಲೈನ್ ಪೇಮೆಂಟ್ ವ್ಯವಸ್ಥೆಯಿಂದ ರೈತರ ಖಾತೆಗೆ ೨೪ ಗಂಟೆಗಳಲ್ಲಿ ಹಣ ಪಾವತಿಯಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.