ನವದೆಹಲಿ: ಏಷ್ಯಾವು ಕಡಲತೀರದ ಪವನ ಶಕ್ತಿಯ ಸ್ಥಾಪಿತ ಸಾಮರ್ಥ್ಯದ ಪಾಲನ್ನು 2018 ರಲ್ಲಿ ಇದ್ದ 230 ಗಿಗಾವ್ಯಾಟ್ (GW)ಯಿಂದ 2050ರ ವೇಳೆಗೆ 2,600 ಗಿಗಾವ್ಯಾಟ್ಗೆ ಹೆಚ್ಚಿಸಲಿದೆ ಎಂದು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಹೇಳಿದೆ.
ಆ ವೇಳೆಗೆ, ಈ ಪ್ರದೇಶವು ಪವನ ಶಕ್ತಿಯಲ್ಲಿ ಜಾಗತಿಕ ನಾಯಕನಾಗಲಿದೆ, ಇದು ಜಗತ್ತಿನ ಕಡಲತೀರದ ಒಟ್ಟು ಪವನ ಶಕ್ತಿಯ ಶೇ.50ಕ್ಕಿಂತಲೂ ಹೆಚ್ಚಿನದಾಗಿರಲಿದೆ ಮತ್ತು ಜಾಗತಿಕವಾಗಿ ಸ್ಥಾಪಿಸಲಾದ ಎಲ್ಲಾ ಕಡಲಾಚೆಯ ಪವನ ಶಕ್ತಿಯ ಸಾಮರ್ಥ್ಯದ ಶೇಕಡಾ 60 ಕ್ಕಿಂತ ಹೆಚ್ಚಾಗಲಿದೆ.
ಏಷ್ಯಾದೊಳಗೆ 2050 ರ ವೇಳೆಗೆ 2,525 GW ಸ್ಥಾಪಿತ ಕಡತೀರದ ಮತ್ತು ಕಡಲಾಚೆಯ ಪವನ ಶಕ್ತಿ ಸಾಮರ್ಥ್ಯದ ಮೂಲಕ ಚೀನಾ ಮುನ್ನಡೆಯನ್ನು ಸಾಧಿಸಲಿದೆ, ನಂತರದ ಸ್ಥಾನದಲ್ಲಿ ಭಾರತ (443 GW), ಕೊರಿಯಾ (78 GW) ಮತ್ತು ಆಗ್ನೇಯ ಏಷ್ಯಾ (16 GW) ಇರಲಿದೆ.
ಬೀಜಿಂಗ್ನ ಚೀನಾ ವಿಂಡ್ ಪವರ್ನಲ್ಲಿ ಪ್ರಕಟವಾದ “ಫ್ಯೂಚರ್ ಆಫ್ ವಿಂಡ್” ಪ್ರಕಾರ, ಜಾಗತಿಕ ಪವನ ಶಕ್ತಿಯು 2050 ರ ವೇಳೆಗೆ ಹತ್ತು ಪಟ್ಟು ಏರಿಕೆಯಾಗಿ 6,000 ಗಿಗಾವ್ಯಾಟ್ಗೆ ತಲುಪಬಹುದು.
ಶತಮಾನದ ಮಧ್ಯಭಾಗದಲ್ಲಿ, ಗಾಳಿಯು ಮೂರನೇ ಒಂದು ಭಾಗದಷ್ಟು ಜಾಗತಿಕ ವಿದ್ಯುತ್ ಅಗತ್ಯಗಳನ್ನು ಪೂರೈಸಬಲ್ಲದು. ಪ್ಯಾರಿಸ್ ಹವಾಮಾನ ಗುರಿಗಳನ್ನು ಪೂರೈಸಲು ಬೇಕಾದ ಇಂಧನ-ಸಂಬಂಧಿತ ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಮಹತ್ವದ ಕೊಡುಗೆ ನೀಡಲಿದೆ.
ನವೀಕರಿಸಬಹುದಾದ ಇಂಧನದ ಮೂಲಕ ಭವಿಷ್ಯದಲ್ಲಿ ಸುರಕ್ಷಿತ ವಾತಾವರಣವನ್ನು ಸಾಧಿಸಲು ಸಾಧ್ಯ ಎಂದು IRENAದ ಪ್ರಧಾನ ನಿರ್ದೇಶಕ ಫ್ರಾನ್ಸಿಸ್ಕೋ ಲಾ ಕ್ಯಾಮೆರಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.