ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ‘Bridgital Nation: Solving Technology’s People Problem’ ಎಂಬ ಪುಸ್ತಕವನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದರು.
ಎನ್. ಚಂದ್ರಶೇಖರನ್ ಮತ್ತು ರೂಪಾ ಪುರುಷೋತ್ತಮ್ ಬರೆದಿರುವ ಪುಸ್ತಕ ಇದಾಗಿದ್ದು, ಈ ಪುಸ್ತಕವನ್ನು ಬಿಡುಗಡೆ ಮಾಡಿ ಅದರ ಮೊದಲ ಪ್ರತಿಯನ್ನು ರತನ್ ಟಾಟಾ ಅವರಿಗೆ ಮೋದಿ ಹಸ್ತಾಂತರಿಸಿದರು.
ನಂತರ ಮಾತನಾಡಿದ ಮೋದಿ, “ದೂರದೃಷ್ಟಿಯ ಪುಸ್ತಕವೊಂದನ್ನು ಬರೆದಿದ್ದಕ್ಕಾಗಿ ಲೇಖಕರಿಗೆ ಅಭಿನಂದನೆಗಳು, ಇದು ಸಕಾರಾತ್ಮಕತೆ ಮತ್ತು ಆಶಾವಾದದಿಂದ ಕೂಡಿದ ಪುಸ್ತಕ. ತಂತ್ರಜ್ಞಾನದ ಮಹತ್ವದ ಬಗ್ಗೆ ಆಳವಾಗಿ ಇದು ತಿಳಿಸಿಕೊಡುತ್ತದೆ. ತಂತ್ರಜ್ಞಾನವು ಲಕ್ಷಾಂತರ ಭಾರತೀಯರ ಜೀವನವನ್ನು ಸಕಾರಾತ್ಮಕವಾಗಿ ಬದಲಿಸುತ್ತಿರುವ ಸಮಯದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ” ಎಂದು ಹೇಳಿದರು.
Released the book, ‘Bridgital Nation: Solving Technology’s People Problem’ written by N. Chandrasekaran and Roopa Purushothaman. This book adds great value to the discourse around application of technology and human interface. pic.twitter.com/RzFWJV5bgc
— Narendra Modi (@narendramodi) October 20, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.