ನವದೆಹಲಿ: ಜಾಗತಿಕ ಹಣಕಾಸು ನಿಗ್ರಹ ಸಂಸ್ಥೆ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಪಾಕಿಸ್ಥಾನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂದು ಘೋಷಿಸಿದ್ದು, ಎಚ್ಚೆತ್ತುಕೊಳ್ಳಲು ಅದಕ್ಕೆ ನಾಲ್ಕು ತಿಂಗಳ ಕಾಲವಕಾಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, “ಎಫ್ಎಟಿಎಫ್ ಪಾಕಿಸ್ಥಾನಕ್ಕೆ ಕೊನೆಯ ಅವಕಾಶವನ್ನು ನೀಡಿರುವುದು ಅದರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ, ನಾಲ್ಕು ತಿಂಗಳ ಕಾಲ ಅದಕ್ಕೆ ಜೀವದಾನ ಮಾಡಿದೆ” ಎಂದಿದ್ದಾರೆ.
ಸುದ್ದಿ ಸಂಸ್ಥೆಗಳ ಜೊತೆ ಮಾತನಾಡಿದ ಜನರಲ್ ರಾವತ್ ಅವರು, “ಪಾಕಿಸ್ಥಾನದ ಮೇಲೆ ಒತ್ತಡವಿದೆ. ಅವರು ಕ್ರಮ ತೆಗೆದುಕೊಳ್ಳಲೇಬೇಕಾಗಿದೆ. ಅವರು ಶಾಂತಿಯನ್ನು ಪುನಃಸ್ಥಾಪಿಸುವತ್ತ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ. ಎಫ್ಎಟಿಎಫ್ ಗ್ರೇ ಪಟ್ಟಿಯಲ್ಲಿರುವುದು ಯಾವುದೇ ರಾಷ್ಟ್ರಕ್ಕೂ ಒಂದು ದೊಡ್ಡ ಹಿನ್ನಡೆಯಾಗುತ್ತದೆ” ಎಂದು ಹೇಳಿದ್ದಾರೆ.
ಪಾಕಿಸ್ಥಾನ ಶುಕ್ರವಾರ ಎಫ್ಎಟಿಎಫ್ ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳುವುದರಿಂದ ಬಚಾವಾಗಿದೆ. ಭಯೋತ್ಪಾದನಾ ಹಣಕಾಸು ನಿಗ್ರಹ ಕಾರ್ಯಾಚರಣೆಯನ್ನು ಸುಧಾರಿಸಲು ಫೆಬ್ರವರಿ 2020 ರವರೆಗೆ ಪಾಕಿಸ್ಥಾನಕ್ಕೆ ಸಮಯಾವಕಾಶವನ್ನು ನೀಡಲಾಗಿದೆ. ಭಯೋತ್ಪಾದಕ ಹಣಕಾಸು ಮತ್ತು ಮನಿ ಲಾಂಡರಿಂಗ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆ ದೇಶಕ್ಕೆ ನಿರ್ದೇಶನವನ್ನು ನೀಡಲಾಗಿದೆ. ಇದರ ಜೊತೆಗೆ ಆ ದೇಶ ಭಯೋತ್ಪಾದಕ ಹಣಕಾಸು ಅಪಾಯಗಳನ್ನು ಪರಿಹರಿಸುವಲ್ಲಿ ಪ್ರಗತಿಯ ಕೊರತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಫೆಬ್ರವರಿ 2020 ರ ವೇಳೆಗೆ ಪಾಕಿಸ್ಥಾನ ತನ್ನ ಭಯೋತ್ಪಾದನಾ ಹಣಕಾಸು ನಿಗ್ರಹದ ಪೂರ್ಣ ಕ್ರಿಯಾಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ನಾವು ಬಲವಾಗಿ ಒತ್ತಾಯಿಸುತ್ತೇವೆ, ಇಲ್ಲದಿದ್ದರೆ ಮುಂದಿನ ಫೆಬ್ರವರಿ ವೇಳೆಗೆ ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಫ್ಎಟಿಎಫ್ ಖಡಕ್ ಎಚ್ಚರಿಕೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.