ನವದೆಹಲಿ: ಯುಎಇ-ಇಂಡಿಯಾ ಫುಡ್ ಕಾರಿಡಾರ್ ಯೋಜನೆಯ ಭಾಗವಾಗಿ ಯುಎಇ ಸಂಸ್ಥೆಗಳು ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆಹಾರ ಕ್ಷೇತ್ರದಲ್ಲಿ 7 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಿದೆ.
“ದುಬೈ ಮೂಲದ ಎಮಾರ್ ಗ್ರೂಪ್ ಸಂಘಟಿಸಿದ ಯುಎಇ ಸಂಸ್ಥೆಗಳು ಭಾರತೀಯ ನಗರಗಳಲ್ಲಿರುವ ಮೆಗಾ ಫುಡ್ ಪಾರ್ಕ್ಗಳು ಮತ್ತು ಅಂತಹುದೇ ಸೌಲಭ್ಯಗಳ ಮೇಲೆ 5 ಬಿಲಿಯನ್ ಯುಎಸ್ ಡಾಲರ್ ವರೆಗೆ ಹೂಡಿಕೆ ಮಾಡಲು ಯೋಜಿಸಿವೆ ಮತ್ತು ಗುತ್ತಿಗೆ ಕೃಷಿ, ಕೃಷಿ ಸರಕುಗಳ ಮೂಲ ಮತ್ತು ಸಂಬಂಧಿತ ಮೂಲಸೌಕರ್ಯಗಳಲ್ಲಿ 2 ಬಿಲಿಯನ್ ಯುಎಸ್ ಡಾಲರ್ ವರೆಗೆ ಹೂಡಿಕೆ ಮಾಡಲು ಯೋಜಿಸಿದೆ” ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ.
“ಯುಎಇ ಸಂಸ್ಥೆಗಳು ವಿವಿಧ ಭಾರತೀಯ ನಗರಗಳಲ್ಲಿರುವ ಮೆಗಾ ಫುಡ್ ಪಾರ್ಕ್ಗಳು, ಲಾಜಿಸ್ಟಿಕ್ಸ್ ಮತ್ತು ಗೋದಾಮಿನ ಹಬ್ಗಳಲ್ಲಿ, ಹಣ್ಣುಗಳು ಮತ್ತು ತರಕಾರಿ ಹಬ್ಗಳಲ್ಲಿ 5 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿವೆ, ಇದು ಭಾರತದಾದ್ಯಂತ 200,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ” ಎಂದು ಸಚಿವರು ಹೇಳಿದ್ದಾರೆ. ಅವರು ಈ ವಾರದ ಆರಂಭದಲ್ಲಿ ಯುಎಇಗೆ ಅಧಿಕೃತ ಭೇಟಿಯನ್ನು ನೀಡಿದ್ದರು.
ಗುಜರಾತ್ನ ಕಚ್ನಲ್ಲಿರುವ ಮೆಗಾ ಫುಡ್ ಪಾರ್ಕ್ಗಳು ಮತ್ತು ಮಹಾರಾಷ್ಟ್ರದ ಔರಂಗಾಬಾದ್, ಮಧ್ಯಪ್ರದೇಶದ ಪವರ್ಖೇಡಾದಲ್ಲಿರುವ ಆಹಾರ ಉದ್ಯಾನವನ, ಇಟಾರ್ಸಿಯ ಲಾಜಿಸ್ಟಿಕ್ಸ್ ಮತ್ತು ಗೋದಾಮಿನ ಹಬ್, ನಾಸಿಕ್ ಹಣ್ಣುಗಳು ಮತ್ತು ತರಕಾರಿ ಹಬ್, ಮಹಾರಾಷ್ಟ್ರದ ಭಿವಾಂಡಿಯಲ್ಲಿರುವ ಗೋದಾಮಿನ ಹಬ್ ಸೇರಿದಂತೆ ದೇಶದ ವಿವಿಧ ನಗರಗಳು ಪ್ರಸ್ತಾಪಿತ ಯೋಜನೆಯ ಭಾಗವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.