ನವದೆಹಲಿ: ಬಜಾಜ್ ಆಟೋ ತನ್ನ ‘ಐಕಾನಿಕ್ ಚೇತಕ್’ ಸ್ಕೂಟರ್ ಅನ್ನು ಮರಳಿ ತರಲು ಸಜ್ಜಾಗಿದೆ, ಆದರೆ ಹೊಸ ಅವತಾರದಲ್ಲಿ. ಬುಧವಾರ, ಕಂಪನಿಯು ತನ್ನ ಎಲೆಕ್ಟ್ರಿಕ್ ಆವೃತ್ತಿಯ ಚೇತಕ್ ಅನ್ನು ಅನಾವರಣಗೊಳಿಸಿದೆ ಮತ್ತು ಇದರ ಚಿಲ್ಲರೆ ಮಾರಾಟವು 2020ರ ಜನವರಿಯಿಂದ ಪ್ರಾರಂಭವಾಗಲಿದೆ ಎಂದು ಅದು ಹೇಳಿದೆ.
ಇ-ಸ್ಕೂಟರ್ ಅನ್ನು ಆರಂಭದಲ್ಲಿ ಪುಣೆ ಮತ್ತು ಬೆಂಗಳೂರಿನಲ್ಲಿ ಹೊರತರಲಾಗುತ್ತಿದೆ ಮತ್ತು ‘ಪ್ರೊ-ಬೈಕಿಂಗ್’ ನೆಟ್ವರ್ಕ್ ಮೂಲಕ ಇದರ ಮಾರಾಟವನ್ನು ಮಾಡಲಾಗುತ್ತದೆ. “ನಾವು ಚೇತಕ್ ಎಲೆಕ್ಟ್ರಿಕ್ ಅನ್ನು ಬಹಳ ಸ್ಪರ್ಧಾತ್ಮಕವಾಗಿ ಬೆಲೆ ನೀಡುತ್ತೇವೆ” ಎಂದು ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್ ಹೇಳಿದ್ದಾರೆ. ಆದರೆ ಅವರು ಇದರ ನಿಖರ ಬೆಲೆಯನ್ನು ಬಹಿರಂಗಪಡಿಸಿಲ್ಲ.
ಇ-ಸ್ಕೂಟರ್ನ ಚೌಕಟ್ಟು, ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದಶಕಗಳಿಂದ ಪ್ರಾಬಲ್ಯ ಸಾಧಿಸಿದ ಅಪ್ರತಿಮ ಚೇತಕ್ ಅನ್ನು ಆಧರಿಸಿದೆ. ವಿನ್ಯಾಸವು ಅದರ ಮೂಲಕ್ಕೆ ಅನುಗುಣವಾಗಿದೆ. ಆದರೆ ಇದು ವಿಸ್ತರಿತ ಹೊಸ ಫೀಚರ್ಗಳನ್ನು ಹೊಂದಿದೆ. ಆದರೆ ಮುಂಭಾಗವು ಹೆಡ್ಲ್ಯಾಂಪ್, ಎಲ್ಇಡಿ ಸೈಡ್ ಬ್ಲಿಂಕರ್ಸ್ ಮತ್ತು ಬ್ಲ್ಯಾಕ್ ಫ್ರಂಟ್ ಗ್ರಿಲ್ ಸುತ್ತಲೂ ಅಂಡಾಕಾರದ ಎಲ್ಇಡಿ ಸ್ಟ್ರಿಪ್ ಅನ್ನು ಹೊಂದಿದೆ.
ಇ-ಸ್ಕೂಟರ್ ಕೀ ಲೆಸ್ ಇಗ್ನಿಷನ್ ಆಗಿದೆ ಮತ್ತು ಇದು ಅಪ್ಲಿಕೇಶನ್ ಮೂಲಕ ಸಂಪೂರ್ಣವಾಗಿ ಸಂಪರ್ಕಿತಗೊಂಡಿದೆ ಮತ್ತು ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ವಿಶೇಷವೆಂದರೆ, ಇ-ಸ್ಕೂಟರ್ ಯಾವುದೇ ಬಜಾಜ್ ಚಿಹ್ನೆ ಅಥವಾ ಬ್ರ್ಯಾಂಡಿಂಗ್ ಅನ್ನು ಹೊಂದಿರುವುದಿಲ್ಲ. ಅಲ್ಲದೇ, ಇದರ ಹೊರಭಾಗ ಲೋಹದ್ದಾಗಿದ್ದು, ಪ್ಲಾಸ್ಟಿಕ್ ಅನ್ನು ದೂರವಿಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.