ನವದೆಹಲಿ: ಯುಪಿಎ ಅಧಿಕಾರದಲ್ಲಿದ್ದಾಗ ಸರ್ಕಾರಿ ಬ್ಯಾಂಕುಗಳಲ್ಲಿ ಭಾರಿ ಪ್ರಮಾಣದ ಕೆಟ್ಟ ಸಾಲಗಳು ಇದ್ದವು ಎನ್ನುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತನ್ನ ಸ್ಥೂಲ ಅರ್ಥಶಾಸ್ತ್ರದ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಸಂಕಷ್ಟಕ್ಕೆ ದೂಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಸಂಯೋಜನೆ ಎಂದು ಅವರು ಆರೋಪಿಸಿದ್ದಾರೆ.
“ರಾಜನ್ ಅವರು ಹೇಳುತ್ತಿರುವ ಪ್ರತಿಯೊಂದು ಮಾತುಗಳಿಗೂ ಅನುಮಾನ ವ್ಯಕ್ತಪಡಿಸಲು ನನಗೆ ಯಾವುದೇ ಕಾರಣವಿಲ್ಲ. ರಾಜನ್ ಅವರಿಗೆ ನಾನು ಗೌರವವನ್ನು ನೀಡುತ್ತೇನೆ, ಆದರೆ ಪ್ರಧಾನ ಮಂತ್ರಿ ಮತ್ತು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಸಿಂಗ್ ಮತ್ತು ರಾಜನ್ ಅವರ ಸಂಯೋಜನೆ ಇದ್ದಾಗ, ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳು ಹಿಂದೆಂದೂ ಕಂಡಿರಿಯದ ಕೆಟ್ಟ ಹಂತವನ್ನು ತಲುಪಿದ್ದವು” ಎಂದಿದ್ದಾರೆ.
ಮಂಗಳವಾರ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ಸ್ಕೂಲ್ನಲ್ಲಿ ಮಾತನಾಡಿದ ಅವರು, “ದೀರ್ಘಾವಧಿಯಲ್ಲಿ, ವಿಭಜನೆಯ, ಜನಪ್ರಿಯ ಘೋಷಣೆಗಿಂತ ಆಂತರಿಕ ಒಗ್ಗಟ್ಟು ಮತ್ತು ಆರ್ಥಿಕ ಬೆಳವಣಿಗೆಯು ರಾಷ್ಟ್ರೀಯ ಭದ್ರತೆಗೆ ಭಾರತದ ಮೂಲವಾಗಲಿದೆ ಎಂದು ನನಗೆ ತೋರುತ್ತದೆ. ಈ ರೀತಿಯ ಜನಪ್ರಿಯ ಘೋಷಣೆಗಳಿಂದ ಸ್ವಲ್ಪ ಸಮಯದವರೆಗೆ ಚುನಾವಣೆಯನ್ನು ಗೆಲ್ಲಬಹುದು, ಆದರೆ ಅದು ಭಾರತವನ್ನು ಕರಾಳ ಮತ್ತು ಅನಿಶ್ಚಿತ ಹಾದಿಯತ್ತ ಇಳಿಸುತ್ತದೆ”ಎಂದಿದ್ದಾರೆ.
ಪ್ರಸ್ತುತ ಬ್ಯಾಂಕುಗಳು ಸಂಕಷ್ಟವನ್ನು ಎದುರಿಸಲು ಹಿಂದಿನ ಯುಪಿಎ ಸರ್ಕಾರವೇ ಕಾರಣ. ಯುಪಿಎ ಅವಧಿಯಲ್ಲೇ ಕೆಟ್ಟ ಸಾಲಗಳು ಹಂಚಿಕೆಯಾಗಿವೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.