ಮಂಗಳೂರು: ಸೆಪ್ಟೆಂಬರ್ 25 ರಂದು ಕಾರ್ಯಾರಂಭ ಮಾಡಿದ್ದ ಇಂಡಿಯನ್ ಕೋಸ್ಟ್ ಗಾರ್ಡ್ ಕಡಲ ತೀರದ ಕಣ್ಗಾವಲು ಹಡಗು (OPV) ವರಾಹ ಮಂಗಳವಾರ ತನ್ನ ತವರು ಬಂದರಾದ ನವ ಮಂಗಳೂರು ಬಂದರಿಗೆ ಆಗಮಿಸಿದೆ.
ಪಣಂಬೂರಿನಲ್ಲಿರುವ ಎನ್ಎಂಪಿಟಿ ಬಂದರಿನಲ್ಲಿ ಕೋಸ್ಟ್ ಗಾರ್ಡ್ ಪಡೆಗೆ ಹಡಗು ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಕೋಸ್ಟ್ ಗಾರ್ಡ್ ಪಡೆಯ ಹಿರಿಯ ಅಧಿಕಾರಿಗಳಾದ ರಾಜ್ ಕಮಲ್ ಸಿನ್ಹಾ, ಲಕ್ಷ್ಮೀಕಾಂತ್ ಗಜಿಭಿಯೆ, ಸಿಐಎಸ್ಎಫ್ ಅಧಿಕಾರಿ ಆಶುತೋಷ್ ಗೌರ್ ಅವರು ನೂತನ ನೌಕೆಯನ್ನು ಸ್ವಾಗತಿಸಿದರು. ಕರಾವಳಿಯ ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ಭದ್ರತೆಯ ಮೇಲೆ ಅಧಿಕಾರಿಗಳು ನಿಗಾವಹಿಸಲು ವರಾಹ ಹಡಗು ಸಹಾಯ ಮಾಡಲಿದೆ.
ಪತ್ರಿಕಾ ಪ್ರಕಟಣೆಯ ಪ್ರಕಾರ, ಎಲ್ & ಟಿ ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿರುವ 98 ಮೀಟರ್ ಉದ್ದದ ವರಾಹ ಸುಧಾರಿತ ಸಂಚರಣೆ ಮತ್ತು ಸಂವಹನ ಸಾಧನಗಳು, ಸಂವೇದಕಗಳು ಮತ್ತು ಯಂತ್ರೋಪಕರಣಗಳನ್ನು ಹೊಂದಿದೆ.
ಈ ಹಡಗು ತುರ್ತು ಸಂದರ್ಭದಲ್ಲಿ ಎರಡು ಎಂಜಿನ್ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ 30 ಎಂಎಂ ಗನ್, 12.7 ಎಂಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸಾರ್, ಹೈಸ್ಪೀಡ್ ಬೋಟ್ಗಳು ಮತ್ತಿತರ ಸೌಲಭ್ಯ ಇರಲಿದೆ. 14 ಅಧಿಕಾರಿಗಳು ಮತ್ತು 89 ಮಂದಿ ಸಿಬ್ಬಂದಿಯನ್ನು ಹೊಂದಿರುವ ವರಾಹ ಹಡಗು ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿರಲಿದೆ.
ವೇಗದ ಬೋರ್ಡಿಂಗ್ ಕಾರ್ಯಾಚರಣೆ, ಶೋಧ ಮತ್ತು ಪಾರುಗಾಣಿಕಾ ಮತ್ತು ಕಡಲ ಗಸ್ತು ತಿರುಗುವಿಕೆಗಾಗಿ ಒಂದು ಅವಳಿ ಎಂಜಿನ್ ಲೈಟ್ ಹೆಲಿಕಾಪ್ಟರ್ ಮತ್ತು ನಾಲ್ಕು ಹೈಸ್ಪೀಡ್ ದೋಣಿಗಳನ್ನು ಸಾಗಿಸಲು ಈ ಹಡಗನ್ನು ವಿನ್ಯಾಸಗೊಳಿಸಲಾಗಿದೆ. ತೈಲ ಸೋರಿಕೆ ಮಾಲಿನ್ಯವನ್ನು ಎದುರಿಸಲು ಹಡಗು ಸ್ಪಂದನಾ ಸಾಧನಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ದೇಶದ ಕಡಲ ಹಿತಾಸಕ್ತಿಗಳನ್ನು ಕಾಪಾಡಲು ಕೋಸ್ಟ್ ಗಾರ್ಡ್ ಚಾರ್ಟ್ನಲ್ಲಿ ಪ್ರತಿಪಾದಿಸಿರುವ ವಿಶೇಷ ಆರ್ಥಿಕ ವಲಯ (SEZ)ದ ಕಣ್ಗಾವಲು ಮತ್ತು ಇತರ ಕರ್ತವ್ಯಗಳಿಗಾಗಿ ಹಡಗನ್ನು ನಿಯೋಜಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.