ಪ್ಯಾರೀಸ್: ಅಂತಾರಾಷ್ಟ್ರೀಯ ಉಗ್ರ ಹಣಕಾಸು ನಿಗ್ರಹ ಸಂಸ್ಥೆ FATF ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಬಹುತೇಕ ನಿಶ್ಚಿತ. ಮೂಲಗಳ ಪ್ರಕಾರ ಅದು ಪಾಕಿಸ್ಥಾನವನ್ನು ಗ್ರೇ ಪಟ್ಟಿಯಿಂದ ತೆಗೆದು ‘ಡಾರ್ಕ್ ಗ್ರೇ’ ಪಟ್ಟಿಗೆ ಸೇರಿಸಲು ಚಿಂತನೆ ನಡೆಸುತ್ತಿದೆ.
ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್)ನಲ್ಲಿ ನಡೆಯುತ್ತಿರುವ ಪಾಲ್ಗೊಳ್ಳುತ್ತಿರುವ ಅಧಿಕಾರಿಗಳು ಹೇಳುವಂತೆ, ಉಗ್ರರಿಗೆ ಹಣಕಾಸು ಸಿಗುವುದನ್ನು ತಡೆಗಟ್ಟಲು ಸಾಕಷ್ಟು ಕೆಲಸ ಮಾಡದ ಕಾರಣ ಪಾಕಿಸ್ಥಾನವನ್ನು ಎಲ್ಲಾ ಸದಸ್ಯರು ಟೀಕಿಸಿದ್ದಾರೆ ಮತ್ತು ಅದರ ವಿರುದ್ಧ ನಿಲುವು ತಳೆದಿದ್ದಾರೆ ಎಂದಿದ್ದಾರೆ.
ಅಕ್ಟೋಬರ್ 18ರಂದು FATF ತನ್ನ ನಿರ್ಧಾರವನ್ನು ಅಂತಿಮಗೊಳಿಸಲಿದೆ.
ಗ್ರೇ ಮತ್ತು ಬ್ಲ್ಯಾಕ್ ಪಟ್ಟಿಗಳ ನಡುವೆ ಇರುವ ಮತ್ತೊಂದು ಪ್ರಮುಖ ಡಾರ್ಕ್ ಗ್ರೇ ಪಟ್ಟಿಯಲ್ಲಿ ಪಾಕಿಸ್ಥಾನವನ್ನು ಹಾಕಲು FATF ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
‘ಡಾರ್ಕ್ ಗ್ರೇ’ಯ ಅರ್ಥ ಎಂದರೆ ಬಲವಾದ ಎಚ್ಚರಿಕೆಯನ್ನು ನೀಡುವುದು, ಸಂಬಂಧಪಟ್ಟ ದೇಶವು ತನ್ನನ್ನು ತಾನು ಸುಧಾರಿಸಲು ಕೊನೆಯ ಅವಕಾಶವನ್ನು ನೀಡುವುದು ಈ ಪಟ್ಟಿಯ ಉದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಫ್ಎಟಿಎಫ್ ಎನ್ನುವುದು 1989 ರಲ್ಲಿ ಸ್ಥಾಪಿಸಲಾದ ಅಂತರ್-ಸರ್ಕಾರಿ ಸಂಸ್ಥೆಯಾಗಿದ್ದು, ಹಣ ವರ್ಗಾವಣೆ, ಭಯೋತ್ಪಾದಕ ಹಣಕಾಸು ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಸಂಬಂಧಿಸಿದ ಇತರ ಬೆದರಿಕೆಗಳನ್ನು ಎದುರಿಸಲು ಇದನ್ನು ಸ್ಥಾಪನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.