ಮಂಗಳೂರು: ಮಂಗಳೂರಿನ ಸ್ನಾತಕೋತ್ತರ ವಿದ್ಯಾರ್ಥಿನಿ ಅಪೇಕ್ಷಾ ಕೊಟ್ಟಾರಿ ಅವರು ‘ಇನ್ಕ್ರೆಡಿಬಲ್ ಇಂಡಿಯಾ’ ಎಂಬ ವಿಷಯದ ಮೇಲೆ ಅತೀ ಉದ್ದದ ಉಡುಗೊರೆ ವಸ್ತುವಾದ ‘ಎಕ್ಸ್ಪ್ಲೋಝನ್ ಬಾಕ್ಸ್’ ಅನ್ನು ವಿನ್ಯಾಸಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರವೇಶ ಪಡೆದುಕೊಂಡಿದ್ದಾಳೆ.
ಅಪೇಕ್ಷಾ ಹೋಮ್ ಟ್ಯೂಟರ್ ಆಗಿದ್ದು, ಪ್ರಸ್ತುತ ಅವರು ಮಂಗಳೂರಿನ ಬೆಸೆಂಟ್ ಈವ್ನಿಂಗ್ ಕಾಲೇಜಿನಿಂದ ಸ್ನಾತಕೋತ್ತರ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರು ಈವರೆಗೆ 35 ಕ್ಕೂ ಹೆಚ್ಚು ವಿಶಿಷ್ಟ ಉಡುಗೊರೆ ವಸ್ತುಗಳನ್ನು ತಯಾರಿಸಿದ್ದಾರೆ.
“ನಾನು ಮಂಗಳೂರಿನವಳು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರವೇಶಿಸಿದ್ದಕ್ಕೆ ಸಂತೋಷಗೊಂಡಿದ್ದೇನೆ. ಬಾಲ್ಯದಿಂದಲೂ ಕರಕುಶಲ ವಸ್ತುಗಳನ್ನು ತಯಾರಿಸುವ ಆಸಕ್ತಿ ಹೊಂದಿದ್ದೆ. ನನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅವರ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ನಾನೇ ತಯಾರಿಸಿದ ಉಡುಗೊರೆ ವಸ್ತುಗಳು ಮತ್ತು ಕರಕುಶಲ ವಸ್ತುಗಳನ್ನು ನೀಡುತ್ತಿದ್ದೆ. ಕ್ರಮೇಣ ನಾನು ಯುಟ್ಯೂಬ್ ವೀಡಿಯೊಗಳನ್ನು ನೋಡಿ ಉಡುಗೊರೆ ಬಾಕ್ಸ್ ಮತ್ತು ಇತರ ವಸ್ತುಗಳನ್ನು ತಯಾರಿಸಲು ಕಲಿತೆ” ಎಂದು ಅಪೇಕ್ಷಾ ಹೇಳುತ್ತಾರೆ.
ಅನನ್ಯವಾದ ‘ಎಕ್ಸ್ಪ್ಲೋಝನ್ ಬಾಕ್ಸ್’ ಉಡುಗೊರೆ ಪೆಟ್ಟಿಗೆಯನ್ನು ತಯಾರಿಸಿದ್ದಕ್ಕಾಗಿ ತಾನು ವಿಶೇಷ ಎಕ್ಸ್ಕ್ಲೋಸಿವ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿದ್ದೇನೆ ಎಂಬುದಾಗಿಯೂ ಕೊಟ್ಟಾರಿ ಹೇಳಿದ್ದಾರೆ.
“ಈ ಪೆಟ್ಟಿಗೆಯ ಅಳತೆ ಮುಚ್ಚಿದಾಗ 25×25 ಸೆಂ.ಮೀ ಮತ್ತು ತೆರೆದಾಗ ಅದರ ಉದ್ದ ಸುಮಾರು 1,000 ಸೆಂ.ಮೀ. ಸಂಪೂರ್ಣ ಪೆಟ್ಟಿಗೆಯನ್ನು ‘ಇನ್ಕ್ರೆಡಿಬಲ್ ಇಂಡಿಯಾ’ ಎಂಬ ವಿಷಯದ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದು ಎಲ್ಲಾ ರಾಜ್ಯಗಳ ಚಿತ್ರಗಳು ಮತ್ತು ಮಾಹಿತಿಯನ್ನು ಒಳಗೊಂಡಿದೆ, ಕೇಂದ್ರಾಡಳಿತ ಪ್ರದೇಶಗಳು, ಭಾರತದ ಶ್ರೇಷ್ಠ ವ್ಯಕ್ತಿಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಇದರಲ್ಲಿ ಇದ್ದಾರೆ. ನಾನು ಗಿನ್ನೆಸ್ ವಿಶ್ವ ದಾಖಲೆಗೂ ಅರ್ಜಿ ಸಲ್ಲಿಸುತ್ತೇನೆ “ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.