ನವದೆಹಲಿ : ಭಾರತವು ವಿಶ್ವಸಂಸ್ಥೆಗೆ ಎಲ್ಲಾ ಬಾಕಿಗಳನ್ನು ಮರುಪಾವತಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದಿನ್ ಅವರು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಅಕ್ಬರುದ್ದಿನ್ ಅವರು, ವಿಶ್ವಸಂಸ್ಥೆಗೆ ಬಾಕಿ ಇದ್ದ ಎಲ್ಲ ಮೊತ್ತವನ್ನು ಮರುಪಾವತಿಸಿದ ವಿಶ್ವದ 35 ದೇಶಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. 193 ದೇಶಗಳ ಪೈಕಿ ಕೇವಲ 35 ದೇಶಗಳು ವಿಶ್ವಸಂಸ್ಥೆಗೆ ಎಲ್ಲಾ ಬಾಕಿಗಳನ್ನು ಮರುಪಾವತಿಸಿದ ಎಂದು ಹೇಳಿಕೊಂಡಿದ್ದಾರೆ.
All paid.
Only 35 States of 193 have paid all dues to @UN as of today…. pic.twitter.com/FKJaWKp0ti
— Syed Akbaruddin (@AkbaruddinIndia) October 11, 2019
ಎಲ್ಲಾ ಬಾಕಿಗಳನ್ನು ಪಾವತಿಸಿದ ದೇಶಗಳ ಪೈಕಿ ಭಾರತವು ಒಂದು ಎಂಬುದು ವಿಷಯವಾಗಿದೆ.
ವಿಶ್ವಸಂಸ್ಥೆಯು ದಶಕಗಳಲ್ಲಿ ಅತಿ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಅವರು ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೆ ಸಿಬ್ಬಂದಿಗಳಿಗೆ ವೇತನವನ್ನು ನೀಡಲು ಕಷ್ಟವಾಗುತ್ತಿದೆ ಎಂದು ಹೇಳಿದ್ದರು.
ಹಲವಾರು ದೇಶಗಳು ತಮ್ಮ ಪಾವತಿಯನ್ನು ವಿಳಂಬ ಮಾಡುತ್ತಿವೆ ಎಂದು ಹೇಳಲಾಗಿದೆ.
ಪಾವತಿಯನ್ನು ವಿಳಂಬ ಮಾಡುತ್ತಿರುವ ಅಥವಾ ಬಾಕಿ ಉಳಿಸಿಕೊಂಡಿರುವ ದೇಶಗಳ ಮೇಲೆ ವಿಶ್ವಸಂಸ್ಥೆಯ ಬಜೆಟ್ ಯಾವುದೇ ರೀತಿಯ ದಂಡ ಅಥವಾ ಬಡ್ಡಿಯನ್ನು ಹಾಕುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.