ನವದೆಹಲಿ : ಬಂಗಾಳಿ ಕವಿಯತ್ರಿ, ಬ್ರಿಟಿಷ್ ಭಾರತದ ಮೊದಲ ಮಹಿಳಾ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾಮಿನಿ ರಾಯ್ ಅವರ 115ನೇ ಜನ್ಮದಿನ ಇಂದು. ಈ ಹಿನ್ನೆಲೆಯಲ್ಲಿ ವಿಶೇಷ ಡೂಡಲ್ ಅನ್ನು ವಿನ್ಯಾಸ ಪಡಿಸುವ ಮೂಲಕ ಗೂಗಲ್ ಅವರಿಗೆ ಗೌರವವನ್ನು ನೀಡಿದೆ.
ಕಾಮಿನಿ ರಾಯ್ ಅವರು ಲೇಖಕಿ, ಶಿಕ್ಷಕಿ ಮತ್ತು ಹೋರಾಟಗಾರ್ತಿಯಾಗಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಬ್ರಿಟಿಷ್ ಭಾರತದ ಮೊದಲ ಮಹಿಳಾ ಪದವೀಧರೆ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ.
ಮಹಿಳೆಯರ ಹಕ್ಕುಗಳ ಪರವಾಗಿ ದಿಟ್ಟತನದಿಂದ ಹೋರಾಡುತ್ತಿದ್ದ ಇವರು, ಭಾರತದಲ್ಲಿ ಮಹಿಳಾವಾದಿ ಚಿಂತನೆಗಳು ಮೊಳಕೆಯೊಡೆಯುವಂತೆ ಮಾಡಿದರು.
1864ರಲ್ಲಿ ಬಂಗಾಳ ಪ್ರಾಂತ್ಯದ ಬೇಕರಿ ಜಿಲ್ಲೆಯಲ್ಲಿ ಜನಿಸಿದ ಇವರು ಗಣಿತದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು, ಆದರೆ ಬಳಿಕ ಸಂಸ್ಕೃತವನ್ನು ಅಧ್ಯಯನ ಮಾಡಲು ಅವರು ನಿರ್ಧರಿಸಿದರು. ಅತಿ ಸಣ್ಣ ವಯಸ್ಸಿನಲ್ಲೇ ಬರವಣಿಗೆಯನ್ನು ಆರಂಭಿಸಿದವರು, 1889ನಲ್ಲಿ ತಮ್ಮ ಮೊದಲ ಕವಿತೆಯನ್ನು ಪ್ರಕಟಗೊಳಿಸಿದರು.
ಮಹಿಳಾ ಮತದಾನದ ಪರವಾಗಿ ಹೋರಾಟವನ್ನು ನಡೆಸಿದ ಅವರ ಪ್ರಯತ್ನದ ಫಲವಾಗಿ ಸಾವಿರದ 1926ರ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರಿಗೆ ಮತದಾನದ ಮಾಡಲು ಸಾಧ್ಯವಾಯಿತು. ಸಾವಿರ 1933ರಲ್ಲಿ ಇವರು ವಿಧಿವಶರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.