ನವದೆಹಲಿ: ಉತ್ತರ ಪ್ರದೇಶದ ಗೋರಖ್ಪುರದ 22 ವರ್ಷದ ಮಹಿಳೆಯೊಬ್ಬರು ‘ಹೈಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯಲ್ಲಿ ಗೆದ್ದು, ಭಾರತಕ್ಕೆ ಯುಕೆಯ ಉನ್ನತ ರಾಜತಾಂತ್ರಿಕರಾಗುವ ಅವಕಾಶವನ್ನು ಪಡೆದುಕೊಂಡರು.
ಆಯೆಷಾ ಖಾನ್ ಭಾರತದಲ್ಲಿನ ಯುಕೆಯ ಒಂದು ದಿನದ ಹೈ ಕಮಿಷನರ್ ಆಗಿ, ಅತಿ ದೊಡ್ಡ ಸಾಗರೋತ್ತರ ಜಾಲದ ಮೇಲ್ವಿಚಾರಣೆಯನ್ನು, ಬ್ರೀಫಿಂಗ್ ಸೆಷನ್ಗಳ ಅಧ್ಯಕ್ಷತೆಯನ್ನು, ಗಣ್ಯರೊಂದಿಗೆ ನೆಟ್ವರ್ಕಿಂಗ್ ಮತ್ತು ಯೋಜನಾ ಫಲಾನುಭವಿಗಳನ್ನು ಭೇಟಿ ಮಾಡುವ ಮೂಲಕ ಒಂದು ದಿನವನ್ನು ಕಳೆದರು ಎಂದು ಬ್ರಿಟಿಷ್ ಹೈಕಮಿಷನ್ನ ಪತ್ರಿಕಾ ಹೇಳಿಕೆ ತಿಳಿಸಿದೆ.
‘ಹೈ ಕಮಿಷನರ್ ಫಾರ್ ಎ ಡೇ’ ಸ್ಪರ್ಧೆಯು ಅಕ್ಟೋಬರ್ 11ರ ‘ಹೆಣ್ಣು ಮಕ್ಕಳ ಅಂತರರಾಷ್ಟ್ರೀಯ ದಿನಾಚರಣೆ’ಯ ಆಚರಣೆಯಾಗಿದೆ ಮತ್ತು 18-23 ವರ್ಷ ವಯಸ್ಸಿನ ಭಾರತೀಯ ಮಹಿಳೆಯರು ಇದರಲ್ಲಿ ಭಾಗವಹಿಸಲು ಮುಕ್ತರಾಗಿದ್ದಾರೆ.
ಆಯ್ಕೆ ಪ್ರಕ್ರಿಯೆಯ ಭಾಗವಾಗಿ, ಅರ್ಜಿದಾರರಿಗೆ ಲಿಂಗ ಸಮಾನತೆ ಏಕೆ ಮುಖ್ಯವಾಗಿದೆ ಮತ್ತು ಲಿಂಗ ಸಮಾನತೆಯ ಸ್ಫೂರ್ತಿಯಾಗಿ ಯಾರನ್ನು ನೀಡುತ್ತೀರಿ ಎಂಬುದರ ಕುರಿತು ಒಂದು ನಿಮಿಷದ ವೀಡಿಯೊವನ್ನು ರೆಕಾರ್ಡ್ ಮಾಡಲು ಹೇಳಲಾಗಿದೆ. ಸ್ಪರ್ಧೆಗೆ 14 ರಾಜ್ಯಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಭಾರೀ ಪ್ರತಿಕ್ರಿಯೆಯನ್ನು ಕಂಡಿದೆ.
ಒಂದು ದಿನದ ಹೈ ಕಮಿಷನರ್ ಆಗಿ ನೇಮಕಗೊಂಡ ಬಗ್ಗೆ ಅನುಭವ ಹಂಚಿಕೊಂಡ ಆಯೆಷಾ ಖಾನ್ ಅವರು, “ನನ್ನ ದಿನವು ತುಂಬಾ ಬ್ಯೂಸಿಯಾಗಿತ್ತು. ಆದರೆ ನಾನು ತುಂಬಾ ಖುಷಿಪಟ್ಟೆ. ಇದರಿಂದ ನನಗೆ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿತು. ದೈನಂದಿನ ಬ್ರೀಫಿಂಗ್ಗಳನ್ನು ಮುನ್ನಡೆಸುವುದು, ಯುಕೆ ಮತ್ತು ಭಾರತದ ಮಧ್ಯವರ್ತಿಗಳೊಂದಿಗೆ ಸಂವಹನ ನಡೆಸುವುದು ಮತ್ತು ಬಹು-ಸಾಂಸ್ಕೃತಿಕತೆಯ ಸಮೃದ್ಧಿಯನ್ನು ಅನುಭವಿಸುವುದು ಉತ್ತಮ ಅನುಭವವಾಗಿತ್ತು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.