ನವದೆಹಲಿ: ಆರೋಗ್ಯ ವೆಚ್ಚವನ್ನು ಆಯಾ ರಾಜ್ಯ ಬಜೆಟ್ಗಳಲ್ಲಿ ಕನಿಷ್ಠ ಶೇ. 8 ರಷ್ಟು ಹೆಚ್ಚಿಸುವಂತೆ ಕೇಂದ್ರವು ರಾಜ್ಯಗಳಿಗೆ ಮನವಿ ಮಾಡಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ವರ್ಧನ್ ಗುರುವಾರ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ (ಸಿಸಿಎಚ್ಡಬ್ಲ್ಯು) 13 ನೇ ಸಮಾವೇಶವನ್ನು ಉದ್ಘಾಟಿಸಿದ ಸಚಿವರು, 2025 ರ ವೇಳೆಗೆ ಜಿಡಿಪಿಯ ಶೇಕಡಾ 2.5 ರಷ್ಟನ್ನು ಆರೋಗ್ಯ ವೆಚ್ಚಕ್ಕಾಗಿ ವ್ಯಯಿಸುವ ಬಗ್ಗೆ ರಾಷ್ಟ್ರೀಯ ಆರೋಗ್ಯ ನೀತಿ (ಎನ್ಎಚ್ಪಿ) 2017 ರಲ್ಲಿ ಇಟ್ಟ ಗುರಿಯನ್ನು ತಲುಪುವ ನಿಟ್ಟಿನಲ್ಲಿ ರಾಜ್ಯಗಳು ತಮ್ಮ ಬಜೆಟ್ ಹಂಚಿಕೆಯನ್ನು ಏರಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಯುನಿವರ್ಸಲ್ ಹೆಲ್ತ್ ಕವರೇಜ್ (UHC)ನಂತಹ ರಾಷ್ಟ್ರೀಯ ಆರೋಗ್ಯ ಆದ್ಯತೆಗಳ ಬಗ್ಗೆ ಒಮ್ಮತವನ್ನು ನಿರ್ಮಿಸುವುದು, ಕ್ಷಯರೋಗವನ್ನು (ಟಿಬಿ) ನಿರ್ಮೂಲನೆ ಮಾಡುವುದು ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಮುಂತಾದವುಗಳು ಸಿ.ಸಿ.ಹೆಚ್.ಡಬ್ಲ್ಯೂ. ಸಭೆಯ ಉದ್ದೇಶವಾಗಿದೆ ಎಂದು ಡಾ. ಹರ್ಷ್ವರ್ಧನ್ ಹೇಳಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆರೋಗ್ಯ ಖರ್ಚಿನ ಸಾಮೂಹಿಕ ಹೆಚ್ಚಳದ ಮೂಲಕ ಇದನ್ನು ಸಾಧಿಸಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.