ಬಿಹಾರ: ಬಿಹಾರದಲ್ಲಿ ನಕ್ಸಲರ ಉಪಟಳ ಹೆಚ್ಚಾಗಿದೆ, ಅರಣ್ಯದೊಳಗೆ ಕೂತು ದುಷ್ಕೃತ್ಯ ಎಸಗುತ್ತಿದ್ದ ಕೆಂಪು ಉಗ್ರರು ಇದೀಗ ಶಾಲೆಯೊಳಗೆ ನುಗ್ಗಿ ಪ್ರಾಂಶುಪಾಲರಿಗೆಯೇ ಧಮ್ಕಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ.
ಗುರುವಾರ ನಸುಕಿನ ವೇಳೆ ಜಮುಯಿ ಜಿಲ್ಲೆಯ ರಿಸಿಡೆನ್ಸಿಯಲ್ ಶಾಲೆಯೊಂದಕ್ಕೆ ನುಗ್ಗಿದ ನಕ್ಸಲರು ಪ್ರಾಂಶುಪಾಲರ ತಲೆಗೆ ಗನ್ನು ಇಟ್ಟು ಶಾಲೆಯನ್ನು ಮುಚ್ಚುವಂತೆ ಬೆದರಿಕೆಯೊಡ್ಡಿದ್ದಾರೆ.
ಒಂದು ವಾರದೊಳಗೆ ಶಾಲೆಯನ್ನು ಮುಚ್ಚಬೇಕು ಮತ್ತು ಇಲ್ಲಿರುವ ಎಲ್ಲರನ್ನೂ ಒಂದು ವಾರದೊಳಗೆ ಖಾಲಿ ಮಾಡಿಸಬೇಕು ಎಂದು ನಕ್ಸಲರು ತಮಗೆ ಬೆದರಿಕೆ ಹಾಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ನಕ್ಸಲರ ಈ ದುಷ್ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಆ ಪ್ರದೇಶವನ್ನು ವಶಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಶಾಲೆಯನ್ನು ಮುಚ್ಚಿಸಲು ಪ್ರಯತ್ನಿಸುತ್ತಿರಬಹುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.