ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿಯಲ್ಲಿ ರಾಷ್ಟ್ರೀಯ ಭದ್ರತೆಯು ಬಲಿಷ್ಠಗೊಂಡಿದೆ. ನಮ್ಮ ಒಬ್ಬ ಯೋಧ ಹುತಾತ್ಮನಾದರೆ ಅದಕ್ಕೆ ಪ್ರತಿಕಾರವಾಗಿ 10 ಶತ್ರುಗಳನ್ನು ಸದೆ ಬಡಿಯುತ್ತೇವೆ ಎಂಬುದು ಜಗತ್ತಿಗೇ ತಿಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಇತ್ತೀಚೆಗಷ್ಡೇ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸಿ ಹಿಂದಿರುಗಿದ್ದಾರೆ. 370 ನೇ ವಿಧಿಯನ್ನು ರದ್ದುಗೊಳಿಸುವ ನಮ್ಮ ನಿರ್ಧಾರದ ಪರವಾಗಿ ಇಡೀ ಜಗತ್ತು ನಿಂತಿದೆ. ಮತ್ತೊಂದೆಡೆ, ಪಾಕಿಸ್ಥಾನವು ಒಂದು ಮೂಲೆಯಲ್ಲಿ ಏಕಾಂಗಿಯಾಗಿ ನಿಂತಿದೆ” ಎಂದು ಶಾ ಹೇಳಿದ್ದಾರೆ.
370ನೇ ವಿಧಿ ರದ್ದುಗೊಳಿಸಿದರೆ ಕಾಶ್ಮೀರದಲ್ಲಿ ರಕ್ತ ಹರಿಯಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದರು, ಆದರೆ ಇದುವರೆಗೆ ಒಂದೇ ಒಂದು ಬುಲೆಟ್ ಕೂಡ ಪೈಯರ್ ಆಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕರು ಸುಲಭವಾಗಿ ಗಡಿಯನ್ನು ದಾಟಿ ಒಳಗೆ ನುಸುಳುತ್ತಿದ್ದರು, ಆದರೀಗ ಅದು ಸಾಧ್ಯವಿಲ್ಲ. ನರೇಂದ್ರ ಮೋದಿಯವರು ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
“ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷಗಳು 370ನೇ ವಿಧಿ ರದ್ಧತಿಯನ್ನು ವಿರೋಧಿಸಿವೆ. ಯಾಕೆ ವಿರೋಧಿಸಿವೆ ಎಂಬುದನ್ನು ರಾಹುಲ್ ಗಾಂಧಿ ಮತ್ತು ಶರದ್ ಪವರ್ ದೇಶದ ಮಹಾರಾಷ್ಟ್ರದ ಜನತೆಗೆ ವಿವರಿಸಬೇಕು” ಎಂದಿದ್ದಾರೆ.
‘ರಾಹುಲ್ ಗಾಂಧಿ ಮತ್ತು ಪಾಕಿಸ್ಥಾನ ಇಬ್ಬರೂ ಸರ್ಜಿಕಲ್ ಸ್ಟ್ರೈಕ್ ಬಗೆಗೆ ಸಾಕ್ಷಿಗಳನ್ನು ಬಯಸುತ್ತಾರೆ. ರಾಹುಲ್ ಗಾಂಧಿ ಪಾಕಿಸ್ಥಾನದಂತೆಯೇ 370 ನೇ ವಿಧಿ ಮತ್ತು 35A ವಿಧಿ ರದ್ಧತಿ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಇವರಿಬ್ಬರೂ ಪ್ರತಿ ವಿಷಯದಲ್ಲೂ ಒಂದೇ ರೀತಿಯಲ್ಲಿ ಯೋಚನೆಯನ್ನು ಹೊಂದಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅಮಿತ್ ಶಾ ಹೇಳಿದ್ದಾರೆ.
Both Rahul Gandhi and people from Pakistan want proof of the surgical strikes. Rahul Gandhi also protests against the abrogation of Article 370& 35A, exactly like Pakistan.
I can’t understand how they have a similar tone on every issue: Shri @AmitShah
— BJP (@BJP4India) October 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.