ಭೋಪಾಲ್: ಮಧ್ಯಪ್ರದೇಶದಲ್ಲಿ ಮದುವೆಯಾಗಲು ಹೊರಟಿರುವ ವರರು ಮನೆಯ ಶೌಚಾಲಯದೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರ ಯೋಜನೆಯಡಿ ಸಿಗುವ ಹಣಕಾಸು ನೆರವನ್ನು ಪಡೆಯಬೇಕಾದರೆ ಇದು ಅನಿವಾರ್ಯ.
ಮುಖ್ಯಮಂತ್ರಿ ಕಲ್ಯಾಣ ವಿವಾಹ/ನಿಖಾ ಯೋಜನೆಯಡಿಯಲ್ಲಿ ಮದುವೆಯಾಗುವ ವಧುವಿಗೆ ಸರ್ಕಾರವು ರೂ.51 ಸಾವಿರಗಳನ್ನು ನೀಡುತ್ತದೆ. ವಧು ಹೋಗುವ ಮನೆಯಲ್ಲಿ ಶೌಚಾಲಯ ಇರುವುದನ್ನು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ ಸರ್ಕಾರವು ವರನಿಗೆ ಶೌಚಾಲಯದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ.
ತಾನು ಮದುವೆಯಾಗಿ ಹೋಗುವ ಮನೆಯಲ್ಲಿ ಶೌಚಾಲಯವಿದೆ ಎಂದು ವಧು ದೃಢೀಕರಿಸಿದ ಬಳಿಕವಷ್ಟೇ ಯೋಜನೆಯಡಿಯಲ್ಲಿ ಆಕೆಗೆ ಹಣವನ್ನು ನೀಡಲಾಗುತ್ತದೆ. ಅಧಿಕಾರಿಗಳಿಗೆ ಮನೆಮನೆಗೆ ತೆರಳಿ ಪರಿಶೀಲಿಸಲು ಸಾಧ್ಯವಾಗದ ಕಾರಣಕ್ಕೆ ಸೆಲ್ಫಿ ಮೊರೆ ಹೋಗಲಾಗಿದೆ. 2013ರಲ್ಲಿ ಈ ಯೋಜನೆ ಆರಂಭಗೊಂಡಿದ್ದು, ಅಂದಿನಿಂದಲೂ ಹಣ ಸಿಗಬೇಕಾದರೆ ವರನ ಮನೆಯಲ್ಲಿ ಶೌಚಾಲಯ ಇರುವುದು ಕಡ್ಡಾಯ ಎಂಬ ನಿಯಮವಿದೆ. ಆದರೆ ಸೆಲ್ಫಿಯನ್ನು ಲಗತ್ತೀಕರಿಸುವುದು ಹೊಸ ಸೇರ್ಪಡೆಯಾಗಿದೆ.
ಮುಖ್ಯಮಂತ್ರಿ ಕಲ್ಯಾಣ ವಿವಾಹ/ನಿಖಾ ಯೋಜನೆಯನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಣು ಮಕ್ಕಳ ಮದುವೆಗಾಗಿ ಈ ಯೋಜನೆಯನ್ನು ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.