ನವದೆಹಲಿ: ಕಳಪೆ ಗುಣಮಟ್ಟದ ಆಟಿಕೆಗಳನ್ನು, ವಸ್ತುಗಳನ್ನು ಉತ್ಪಾದಿಸುವುದರಲ್ಲಿ ಖ್ಯಾತಿ ಪಡೆದಿರುವ ಚೀನಾ ಇದೀಗ ಪ್ಲಾಸ್ಟಿಕ್ನಿಂದ ಅಕ್ಕಿಯನ್ನು ತಯಾರಿಸುತ್ತಿದೆ. ಈ ಅಕ್ಕಿಯನ್ನು ಭಾರತಕ್ಕೆ ರಫ್ತು ಮಾಡಿ ಇಲ್ಲಿನ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂಬ ಅನುಮಾನಗಳು ಮೂಡಿವೆ.
ಪ್ಲಾಸ್ಟಿಕ್ ಅಕ್ಕಿಗಳು ದೇಶದಲ್ಲಿ ಮಾರಾಟವಾಗುತ್ತಿದೆ, ಇದರ ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ.
ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಅಕ್ಕಿಯನ್ನು ಮಾದರಿ ಪರೀಕ್ಷೆಗೊಳಪಡಿಸುವಂತೆ ಆದೇಶಿಸಿದೆ. ಸುಗ್ರೀವ ದುಬೆ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಪ್ಲಾಸ್ಟಿಕ್ ಅಕ್ಕಿಯನ್ನು ಇತರ ಅಕ್ಕಿಯೊಂದಿಗೆ ಸೇರಿಸಿ ಮಾರಲಾಗುತ್ತಿದೆ. ಈ ಪ್ಲಾಸ್ಟಿಕ್ ಅಕ್ಕಿ ಮಾನವನ ದೇಹದೊಳಗೆ ಜೀರ್ಣವಾಗುವುದಿಲ್ಲ. ಅಲ್ಲದೇ ಗಂಭೀರ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಸಾಮಾನ್ಯ ಜನರಿಗೆ ಚೀನಾದಿಂದ ಬರುವ ಪ್ಲಾಸ್ಟಿಕ್ ಅಕ್ಕಿಯನ್ನು ಮತ್ತು ನೈಜ ಅಕ್ಕಿಯನ್ನು ಗುರುತು ಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ದುಬೆ ಹೇಳಿದ್ದಾರೆ.
ದುಬೆ ಹೇಳಿರುವಂತೆ ಪ್ಲಾಸ್ಟಿಕ್ ಅಕ್ಕಿಗಳು ಮಾರಾಟವಾಗುತ್ತಿರುವುದು ನಿಜವೇ ಆದರೆ ಇದೊಂದು ಗಂಭೀರ ವಿಚಾರ. ಈ ಬಗ್ಗೆ ಸರ್ಕಾರಗಳು ಕೂಡಲೇ ಹೆಚ್ಚೆತ್ತು ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಚೀನಾದಿಂದ ಬರುವ ಆಹಾರ ಧಾನ್ಯಗಳನ್ನು ಪರೀಕ್ಷೆಗೊಳಪಡಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.