ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿನ ಪ್ರಗತಿ ಮತ್ತು ಅದು ಸಶಕ್ತ ಕಾರ್ಯಕ್ರಮ ಸಮಿತಿ ಮತ್ತು ಮಿಷನ್ ಸ್ಟೀರಿಂಗ್ ಗ್ರೂಪ್ (ಎಂಎಸ್ಜಿ) ಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪರಿಶೀಲನೆಯನ್ನು ನಡೆಸಿತು.
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿನ ಪ್ರಾರಂಭವಾದಾಗಿನಿಂದ ತಾಯಿ ಮರಣ ಅನುಪಾತ (ಎಂಎಂಆರ್), ಅಂಡರ್ ಫೈವ್ ಮರ್ಟಾಲಿಟಿ ರೇಟ್ (ಯು 5 ಎಂಆರ್) ಮತ್ತು ಐಎಂಆರ್ ಕುಸಿತದಲ್ಲಿ ವೇಗವರ್ಧನೆ ಕಂಡುಬಂದಿದೆ. ಪ್ರಸ್ತುತ ಕುಸಿತದ ದರದಲ್ಲಿ, ಭಾರತವು 2030 ಕ್ಕಿಂತ ಮೊದಲು ತನ್ನ ಸುಸ್ಥಿರತೆ ಅಭಿವೃದ್ಧಿ ಗುರಿ (ಎಸ್ಡಿಜಿ) ಗುರಿಯನ್ನು (ಎಂಎಂಆರ್ – 70, ಯು 5 ಎಂಆರ್ – 25) ತಲುಪಲು ಸಾಧ್ಯವಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
2013 ಕ್ಕೆ ಹೋಲಿಸಿದರೆ 2017 ರಲ್ಲಿ ಮಲೇರಿಯಾ ಪ್ರಕರಣಗಳು ಶೇ.49.09ರಷ್ಟು ಕಡಿಮೆಯಾಗಿದೆ ಮತ್ತು ಅದರಿಂದ ಸಾವುಗಳ ಪ್ರಮಾಣ ಶೇ.50.52ರಷ್ಟು ಕಡಿಮೆಯಾಗಿದೆ. ಇದು ವಿಶ್ವದ ಮಲೇರಿಯಾಗೆ ಹೋಲಿಸಿದರೆ ದೊಡ್ಡ ಯಶಸ್ಸಾಗಿದೆ.
2018-2019ರಲ್ಲಿ 52,744 ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ (ಎಬಿ-ಎಚ್ಡಬ್ಲ್ಯೂಸಿ) ಅನುಮೋದನೆ ನೀಡಲಾಗಿದ್ದು, ಇದರ ಪೈಕಿ 17,149 ಎಚ್ಡಬ್ಲ್ಯೂಸಿಗಳನ್ನು ಕಾರ್ಯಗತಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.