ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್ ವಿಶನ್ ಆಧಾರಿತ ಡ್ರೋನ್ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ವಿಪತ್ತು ಪರಿಹಾರ ಮತ್ತು ಕಣ್ಗಾವಲುಗಾಗಿ ಇದು ಅತ್ಯಂತ ಪ್ರಯೋಜನಕಾರಿಯಾದ ಡ್ರೋನ್ ಆಗಿದೆ.
ತನ್ನ ವಿದ್ಯಾರ್ಥಿಗಳು ‘ಐ ಇನ್ ದಿ ಸ್ಕೈ’ ಎಂಬ ವಿಪತ್ತು ನಿರ್ವಹಣೆ ಮತ್ತು ಮಾನವೀಯ ನೆರವು ಸೇವೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಐಐಟಿ ಮದ್ರಾಸ್ ಹೇಳಿದೆ.
“ಇದನ್ನು ಇನ್ನೂ ಸ್ವಲ್ಪ ಅಭಿವೃದ್ಧಿಪಡಿಸಿದರೆ ಕಣ್ಗಾವಲು ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಬಳಸಬಹುದು. ಈ ದ್ರೋನ್ ಅತ್ಯಂತ ನಾವಿನ್ಯವಾಗಿದ್ದು, ಅಪಾರ ಮೌಲ್ಯವನ್ನು ಹೊಂದಿದೆ. ಮೈಕ್ರೋಸಾಫ್ಟ್ ಮತ್ತು ಲಾಕ್ಹೀಡ್ ಮಾರ್ಟಿನ್ ಕೂಡ ಈ ಪ್ರಾಜೆಕ್ಟ್ ಅನ್ನು ನೆಚ್ಚಿಕೊಂಡಿದೆ” ಎಂದು ಐಐಟಿ ಮದ್ರಾಸ್ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿಆರ್ ಶಂಕರ್ ಹೇಳಿದ್ದಾರೆ.
“ಭಾರತೀಯ ಸಮಸ್ಯೆಗಳಿಗೆ ಸಂಪೂರ್ಣವಾಗಿ ಭಾರತೀಯ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ದೇಶೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿಯೋಜಿಸಲು ಈ ಇನ್ನೋವೇಶನ್ ತಂಡವು ಎನ್ಡಿಎಂಎ ಮತ್ತು ಸೇನಾ ಪಡೆಗಳೊಂದಿಗೆ ಕೆಲಸ ಮಾಡುತ್ತಿದೆ” ಎಂದಿದ್ದಾರೆ.
ಐಐಟಿ ಪ್ರಕಾರ, ಅದರ ಸೆಂಟರ್ ಫಾರ್ ಇನ್ನೋವೇಶನ್ (ಸಿಎಫ್ಐ) ತಂಡವು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಿಲುಕುವ ಜನರ ಬಗ್ಗೆ ನಿಖರ ಮತ್ತು ನಿರ್ಣಾಯಕ ಮಾಹಿತಿಯನ್ನು ಪಡೆಯಲು, ಪರಿಹಾರವನ್ನು ಒದಗಿಸಲು ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ವಿಶನ್ ಆಧಾರಿತ ದ್ರೋನ್ಗಳನ್ನು ನಿರ್ಮಿಸುತ್ತಿದೆ ಎಂದಿದ್ದಾರೆ.
ಈ ಡ್ರೋನ್ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಇದರ ಕೆಲವು ಮಾಡ್ಯೂಲ್ಗಳಿಗಾಗಿ ತಂಡವು ತಮ್ಮದೇ ಆದ ಡೇಟಾಬೇಸ್ಗಳನ್ನು ನಿರ್ಮಿಸಿದೆ.
ಐಐಟಿ ಬಾಂಬೆಯಲ್ಲಿ ನಡೆದ ಇಂಡಿಯನ್ ಇನ್ನೋವೇಶನ್ ಗ್ರೋತ್ ಪ್ರೋಗ್ರಾಂ (ಐಐಜಿಪಿ 2.0) ಯೂನಿವರ್ಸಿಟಿ ಚಾಲೆಂಜ್ನ ಫೈನಲ್ನಲ್ಲಿ ‘ಐ ಇನ್ ದಿ ಸ್ಕೈ’ ತಂಡ ಇತ್ತೀಚೆಗೆ ಪ್ರಶಸ್ತಿಯನ್ನು ಗಳಿಸಿಕೊಂಡಿತು.
ಈ ತಂಡವು 10 ಲಕ್ಷ ರೂ.ಗಳ ಮೌಲ್ಯದ ಈಕ್ವಿಟಿ-ಲೆಸ್ ಫಂಡಿಂಗ್ ಅನ್ನು ಪಡೆಯಲಿದೆ. ಜಾಗತಿಕವಾಗಿ ಕೇವಲ 390 ಯೋಜನೆಗಳಿಗೆ ನೀಡಲಾದ ‘ಮೈಕ್ರೋಸಾಫ್ಟ್ ಎಐ ಫಾರ್ ಅರ್ಥ್’ ಅನುದಾನವನ್ನೂ ತಂಡವು ಸ್ವೀಕರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.