ಲಕ್ನೋ: ಏಕ ಬಳಕೆ ಪ್ಲಾಸ್ಟಿಕ್ ಅನ್ನು ದೇಶದಿಂದ ನಿರ್ಮೂಲನೆ ಮಾಡುವ ನರೇಂದ್ರ ಮೋದಿ ಸರ್ಕಾರದ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದೆ ಭಾರತೀಯ ರೈಲ್ವೇ. ದೇಶದ ಮೊದಲ ಖಾಸಗಿ ಸೆಮಿ-ಹೈ ಸ್ಪೀಡ್ ರೈಲು ಲಕ್ನೋ-ದೆಹಲಿ ತೇಜಸ್ ಎಕ್ಸ್ಪ್ರೆಸ್ ತನ್ನ ಪ್ರಯಾಣಿಕರಿಗೆ ಜೈವಿಕವಾಗಿ ಕರಗುವ ನೀರಿನ ಬಾಟಲಿಗಳನ್ನು ಒದಗಿಸಲು ಆರಂಭಿಸಿದೆ.
“ತೇಜಸ್ ಎಕ್ಸ್ಪ್ರೆಸ್ನಲ್ಲಿ ಪ್ರತಿದಿನ ಕನಿಷ್ಠ 1,500 ಬಾಟಲಿಗಳನ್ನು ಅಪ್ ಮತ್ತು ಡೌನ್ ಟ್ರಿಪ್ಗಳಲ್ಲಿ ನೀಡಲಾಗುತ್ತಿದೆ. ಯಾವ ರೀತಿಯ ಪರಿಣಾಮಗಳನ್ನು ಇವು ಬೀರುತ್ತವೆ ಗಮನಿಸಲು ಮತ್ತು ಅವು ನಿಜವಾಗಿ ಎಷ್ಟರ ಮಟ್ಟಿಗೆ ಜೈವಿಕವಾಗಿ ಕರಗುತ್ತವೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಈ ಬಾಟಲಿಗಳನ್ನು ಕೆಲವು ತಿಂಗಳುಗಳವರೆಗೆ ಬಳಕೆಯಲ್ಲಿರುವಂತೆ ನೋಡಿಕೊಳ್ಳುತ್ತೇವೆ. ಬಾಟಲಿಗಳನ್ನು ಬಳಸಿದ ಬಳಿಕ ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುವುದು” ಲಕ್ನೋ ಪ್ರದೇಶದ ಐಆರ್ಸಿಟಿಸಿಯ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಅಶ್ವಿನಿ ಶ್ರೀವಾಸ್ತವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾದ ಐಆರ್ಸಿಟಿಸಿ ಇದೇ ಮೊದಲ ಬಾರಿಗೆ ಜೈವಿಕವಾಗಿ ಕರಗುವ ಬಾಟಲಿಗಳನ್ನು ಬಳಸಿ ಪರಿಸರ ಸ್ನೇಹಿ ಕ್ರಮ ಕೈಗೊಂಡಿದೆ. “ಜೈವಿಕವಾಗಿ ಕರಗುವ ಬಾಟಲಿಗಳನ್ನು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ತನ್ನ ಮುಂಬಯಿ ಬಾಟ್ಲಿಂಗ್ ಘಟಕದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ತಯಾರಿಸುತ್ತಿದೆ. ಸಾಮಾನ್ಯವಾಗಿ ಬಳಸುವ ಪ್ಲಾಸ್ಟಿಕ್ ಬಾಟಲಿಗಳಿಗೆ ಹೋಲಿಸಿದರೆ ಈ ಪ್ರತಿ ಬಾಟಲಿಯ ಉತ್ಪಾದನೆಯಲ್ಲಿ 15 ಪೈಸೆ ಹೆಚ್ಚುವರಿ ವೆಚ್ಚವಾಗುತ್ತಿದೆ” ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಸರಿಸುಮಾರು 10 ಲಕ್ಷ ಮೆಟ್ರಿಕ್ ಟನ್ ಪಿಇಟಿ ಬಾಟಲಿಗಳನ್ನು ನೀರು, ತಂಪು ಪಾನೀಯ, ಜ್ಯೂಸ್ ಮತ್ತು ಇತ್ಯಾದಿಗಳನ್ನು ಶೇಖರಿಸಿಡಲು, ಸೇವಿಸಲು ಬಳಕೆ ಮಾಡಲಾಗುತ್ತದೆ. ಐಆರ್ಸಿಟಿಸಿ ರೈಲಿನಲ್ಲಿ ಜೈವಿಕ ವಿಘಟನೀಯ ಬಾಟಲಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಜೈವಿಕವಾಗಿ ಕರಗಬಲ್ಲಂತಹ ಪಾಲಿಮರ್ ಅನ್ನು ಬಳಸಿ ಈ ಬಾಟಲಿಯನ್ನು ತಯಾರು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.