ನವದೆಹಲಿ: ಈ ವರ್ಷದ ಫೆಬ್ರವರಿ 27 ರಂದು ನಡೆದ ಕಾದಾಟದ ವೇಳೆ ಪಾಕಿಸ್ಥಾನ ವಾಯುಸೇನೆಗೆ ಸೇರಿದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮತ್ತು ಸಹೋದ್ಯೋಗಿಗಳು ಹಿಂಡನ್ ವಾಯುನೆಲೆಯಲ್ಲಿ ಮಂಗಳವಾರ ವಾಯುಸೇನಾ ದಿನದ ಕಾರ್ಯಕ್ರಮದಲ್ಲಿ ಮಿಗ್ -21 ಬಿಸನ್ ಯುದ್ಧ ವಿಮಾನವನ್ನು ಹಾರಿಸಿದರು.
ಮೂರು ಮಿರಾಜ್ 2000 ವಿಮಾನಗಳು ಮತ್ತು ಎರಡು ಸು -30 ಎಂಕೆಐ ಯುದ್ಧ ವಿಮಾನಗಳು ಕೂಡ ಈ ವೇಳೆ ಅವೆಂಜರ್ ರಚನೆಯನ್ನು ಮಾಡಿ ಹಾರಿದವು. ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಭಾಗವಹಿಸಿದ ಪೈಲಟ್ಗಳು ವಿಮಾನಗಳನ್ನು ಹಾರಿಸಿದರು. ಫೆಬ್ರವರಿ 26 ಮತ್ತು ಫೆಬ್ರವರಿ 27ರ ಮಧ್ಯರಾತ್ರಿ ಪಾಕಿಸ್ಥಾನದ ವಿರುದ್ಧ ನಡೆದ ವೈಮಾನಿಕ ದಾಳಿಯಲ್ಲಿ ಭಾಗವಹಿಸಿದರ ಗೌರವದ ಸಂಕೇತವಾಗಿ ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಭಾಗವಹಿಸಿದ ಏರ್ ಫೈಟರ್ ಪೈಲಟ್ಗಳನ್ನು ಪೆರೇಡ್ನಲ್ಲಿ ಸೇರಿಸಿಕೊಳ್ಳಲಾಯಿತು.
ಪಾಕಿಸ್ಥಾನದ ವಾಯುಪಡೆಯು ಭಾರತೀಯ ವಾಯು ಗಡಿಯನ್ನು ದಾಟಲು ನಡೆಸಲು ಪ್ರಯತ್ನಿಸಿದ ವೇಳೆ ಫೆಬ್ರವರಿ 27 ರಂದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೂ ಒಂದು ದಿನ ಮೊದಲು ಭಾರತೀಯ ವಾಯುಸೇನೆ ಪಾಕಿಸ್ಥಾನದೊಳಗಿರುವ ಬಾಲಕೋಟ್ನ ಭಯೋತ್ಪಾದನಾ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಈ ದಾಳಿಯನ್ನು ನಡೆಸಲಾಗಿತ್ತು.
ಭಾರತೀಯ ವಾಯುಸೇನೆ ತನ್ನ 87 ನೇ ವಾರ್ಷಿಕೋತ್ಸವವನ್ನು ವಾಯುಸೇನಾ ದಿನವಾಗಿ ಇಂದು ಘಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಆಚರಿಸುತ್ತಿದೆ. ಈ ಸಮಾರಂಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಐಎಎಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.