ಕಟಕ್: ನಕಲಿ ಸುದ್ದಿಗಳ ಭೀತಿ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ನಾಶಪಡಿಸುವ ಬೆದರಿಕೆಯನ್ನೊಡ್ಡುತ್ತಿವೆ, ಮಾಧ್ಯಮಗಳು ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕು ಮತ್ತು ನಿರೂಪಣೆಯ ಮೇಲೆ ಹಿಡಿತವನ್ನು ಸಾಧಿಸುವ ಮೂಲಕ ನಕಲಿ ಸುದ್ದಿಗಳನ್ನು ನಿರಾಕರಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಒರಿಸ್ಸಾದ ಕಟಕ್ನಲ್ಲಿ ಪ್ರಮುಖ ಒಡಿಯಾ ದಿನಪತ್ರಿಕೆ ‘ಸಮಾಜ’ದ 100 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸುದ್ದಿಗಳನ್ನು ಸೆನ್ಸೇಷನಲ್ಗೊಳಿಸುವ, ಸುದ್ದಿ ಮತ್ತು ಅಭಿಪ್ರಾಯಗಳನ್ನು ಬೆರೆಸುವ ಪ್ರವೃತ್ತಿಯನ್ನು ದೂರವಿಡುವಂತೆ ಮಾಧ್ಯಮಗಳಿಗೆ ಕರೆ ನೀಡಿದರು. ಮಾಧ್ಯಮಗಳು ಪ್ರಾಮಾಣಿಕವಾಗಿ ಮತ್ತು ಸತ್ಯದ ಸಂಕೇತವಾಗಿ ಉಳಿಯಬೇಕು, ಬಹಳ ಸಂಯಮ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಹೇಳಿದರು.
ಮಾಧ್ಯಮವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರಸ್ತಂಭವೆಂದು ಪರಿಗಣಿಸಲಾಗಿದೆ ಎಂದು ಹೇಳಿದ ನಾಯ್ಡು, ಸಾರ್ವಜನಿಕ ಅಭಿಪ್ರಾಯ ರಚನೆಯಲ್ಲಿ ಮಾಧ್ಯಮಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರು. ಮಾಧ್ಯಮವು ನಾಗರಿಕರಿಗೆ ಅಧಿಕಾರ ನೀಡಬೇಕು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಸಹಾಯ ಮಾಡಬೇಕು ಎಂದು ನಾನು ಪ್ರತಿಪಾದಿಸುತ್ತೇನೆ ಎಂದಿದ್ದಾರೆ.
ಸರ್ಕಾರದಲ್ಲಿನ ಲೋಪದೋಷಗಳನ್ನು ಬಹಿರಂಗಪಡಿಸುವಂತೆ ಮಾಧ್ಯಮಗಳಿಗೆ ಒತ್ತಾಯಿಸಿದ ಉಪ ರಾಷ್ಟ್ರಪತಿಗಳು, ಟಿಆರ್ಪಿಗಳು, ಚಲಾವಣೆಯಲ್ಲಿರುವ ಅಂಕಿ ಅಂಶಗಳು ಮತ್ತು ಬಾಟಮ್ ಲೈನ್ಗಳು ಮುಖ್ಯವಾದರೂ ಮಾಧ್ಯಮಗಳ ಹಾದಿಯನ್ನು ಅವುಗಳ ನಿರ್ದೇಶಿಸಬಾರದು ಎಂದು ಹೇಳಿದರು. ಮಾಧ್ಯಮವು ಸಾಮಾನ್ಯ ಜನರ ಕಲ್ಯಾಣ ಮತ್ತು ರಾಷ್ಟ್ರದ ಪ್ರಗತಿಯನ್ನು ತನ್ನ ಚಟುವಟಿಕೆಗಳ ಕೇಂದ್ರವನ್ನಾಗಿಸಬೇಕು ಎಂದಿದ್ದಾರೆ.
ಗುಣಾತ್ಮಕ ಸುದ್ದಿಗಳನ್ನು ಬಿತ್ತರಿಸುವಂತೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಉತ್ತೇಜಿಸುವಂತೆ ಮಾಧ್ಯಮಗಳಿಗೆ ಅವರು ಕರೆಯನ್ನು ನೀಡಿದರು. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭಾಷೆಯನ್ನು ಪ್ರಚುರಪಡಿಸಲು, ಸಂರಕ್ಷಿಸಲು, ರಕ್ಷಿಸಲು ಮಾಧ್ಯಮಗಳು ಕೈಜೋಡಿಸಬೇಕು ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.