ಇಸ್ಲಾಮಾಬಾದ್ : ಕಾಶ್ಮೀರ ವಿಷಯದಲ್ಲಿ 58 ರಾಷ್ಟ್ರಗಳು ನಮ್ಮನ್ನು ಬೆಂಬಲಿಸುತ್ತಿವೆ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದರು. ಆದರೆ ಈ ರಾಷ್ಟ್ರಗಳು ಯಾವುವು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು ಕೆಂಡಾಮಂಡಲರಾಗಿದ್ದಾರೆ.
ಎಕ್ಸ್ಪ್ರೆಸ್ ನ್ಯೂಸ್ ಎಂಬ ಪಾಕಿಸ್ಥಾನದ ಟಿವಿ ವಾಹಿನಿಗೆ ಖುರೇಶಿ ಅವರು ಸಂದರ್ಶನವನ್ನು ನೀಡಿದ್ದಾರೆ. ಇಲ್ಲೂ ಖರೇಶಿ ಅವರು ಕಾಶ್ಮೀರ ವಿಷಯದಲ್ಲಿ ಪಾಕಿಸ್ಥಾನವನ್ನು 58 ರಾಷ್ಟ್ರಗಳು ಬೆಂಬಲಿಸಿವೆ ಎಂದು ಪದೇ ಪದೇ ಹೇಳಿದ್ದಾರೆ. ಈ ವೇಳೆ ಪತ್ರಕರ್ತ, ಆ 58 ರಾಷ್ಟ್ರಗಳು ಯಾವುದು ಎಂದು ಪ್ರಶ್ನಿಸಿದ್ದಾನೆ. ಆದರೆ ಇದಕ್ಕೆ ಉತ್ತರ ಹೇಳುವ ಬದಲು ಖುರೇಶಿ ಕೆಂಡಾಮಂಡಲರಾಗಿದ್ದಾರೆ.
“ಯಾರ ಅಜೆಂಡಾದಂತೆ ನೀವು ಕಾರ್ಯನಿರ್ವಹಿಸುತ್ತಿದ್ದೀರಿ? ಎಂದು ಪತ್ರಕರ್ತನನ್ನು ಖುರೇಶಿ ಪ್ರಶ್ನಿಸಿದ್ದಾರೆ. “ವಿಶ್ವಸಂಸ್ಥೆಯಲ್ಲಿ ಯಾವ ದೇಶಗಳು ಭಾರತವನ್ನು ಬೆಂಬಲಿಸಿದೆ ಅಥವಾ ಬೆಂಬಲಿಸಿಲ್ಲ ಎಂದು ನೀವು ನನಗೆ ಹೇಳುತ್ತೀರಾ?” ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಇಮ್ರಾನ್ ಖಾನ್ ಅವರ ಕಮೆಂಟ್ ಅನ್ನು ಸಮರ್ಥಿಸಿಕೊಂಡು ಟ್ವಿಟ್ ಮಾಡಿದ ಬಗ್ಗೆ ಕೇಳಿದಾಗಲೂ ಖುರೇಶಿ ಸಿಡಿಮಿಡಿಗೊಂಡಿದ್ದಾರೆ. “ನನಗೆ ನಾನು ಬರೆದ ಟ್ವಿಟ್ ತೋರಿಸಿ, ಇಮ್ರಾನ್ ಖಾನ್ ಬರೆದ ಟ್ವಿಟ್ ಅಲ್ಲ” ಎಂದಿದ್ದಾರೆ. ಅವರ ಟ್ವಿಟ್ ಅನ್ನು ಅವರಿಗೆ ತೋರಿಸಿದಾಗ, ಈ ಟ್ವಿಟ್ನಲ್ಲಿ ಯಾವುದೇ ತಪ್ಪಿಲ್ಲ ಎಂಬ ಸಮಜಾಯಿಷಿಯನ್ನೂ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.