ಜಮ್ಮು : ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಬುಧವಾರ ಜಮ್ಮುವಿನ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಬಿಎಸ್ಎಫ್ನ ಶ್ವಾನದಳ ಕೂಡ ಭಾಗಿಯಾಗಿತ್ತು.
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದ ಶ್ವಾನಗಳು ವಿಶೇಷ ತರಬೇತಿಯನ್ನು ಹೊಂದಿದ ಶ್ವಾನಗಳಾಗಿದ್ದು, ಗಡಿಯನ್ನು ಕಾಯಲು ಬಿಎಸ್ಎಫ್ ಯೋಧರಿಗೆ ಸಹಾಯಮಾಡುತ್ತದೆ. ಮಾತ್ರವಲ್ಲದೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತವೆ. ಇವುಗಳು ನಿನ್ನೆ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು ಮಾನವರಿಗೆ ಮಾದರಿಯಾದವು.
“ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯಂದು ಬಿಎಸ್ಎಫ್ ಸ್ವಚ್ಛತೆಯನ್ನು ಪ್ರಚುರ ಪಡಿಸುತ್ತಿದೆ. ಅಭಿಯಾನದ ಭಾಗವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮ ಯೋಧರು ಕೂಡ ಅಭಿಯಾನದಲ್ಲಿ ಭಾಗಿಯಾಗುತ್ತಿದ್ದಾರೆ, ನಮ್ಮ ಶ್ವಾನಗಳು ಕೂಡ ಈ ಅಭಿಯಾನದ ಅವಿಭಾಜ್ಯ ಭಾಗವಾಗಿದೆ” ಎಂದು ಶ್ವಾನದಳದ ಮುಖ್ಯಸ್ಥ ಜಿ ಎಸ್ ನಾಗ್ ಹೇಳಿದ್ದಾರೆ.
“ಕಸಗಳನ್ನು ಹೆಕ್ಕಿ ಅವುಗಳನ್ನು ಕಸದ ಬುಟ್ಟಿಗೆ ಹಾಕುವ ತರಬೇತಿಯನ್ನು ಶ್ವಾನಗಳಿಗೆ ನೀಡಲಾಗಿದೆ. ಶ್ವಾನಗಳಾದ ನಾವೇ ಕಸಗಳನ್ನು ತೆಗೆದು ಸ್ವಚ್ಛತೆಯಲ್ಲಿ ಭಾಗವಹಿಸಿರುವಾಗ, ಮನುಷ್ಯರಾದ ನೀವು ಕೂಡ ಸ್ವಚ್ಛತೆಯಲ್ಲಿ ಭಾಗವಹಿಸಿ ಎಂಬ ಸಂದೇಶವನ್ನು ಶ್ವಾನಗಳು ರವಾನಿಸುತ್ತಿವೆ” ಎಂದಿದ್ದಾರೆ.
ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸುವ ನಾವು ಸದಾ ಸಿದ್ಧ ಎಂಬ ಸಂದೇಶವನ್ನು ಬಿಎಸ್ಎಫ್ ರವಾನಿಸಲು ಬಯಸುತ್ತಿದೆ ಎಂದು ನಾಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.