ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು 11 ನೇ ಆವೃತ್ತಿಯ DefEXpo ವೆಬ್ಸೈಟ್ ಅನ್ನು ಪ್ರಾರಂಭಿಸಿದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ ಲಕ್ನೋದಲ್ಲಿ ನಡೆಯಲಿರುವ ಡಿಫೆನ್ಸ್ ಎಕ್ಸ್ಪೋದ ಭಾಗವಾಗಿ ಅವರು ವೆಬ್ಸೈಟ್ ಅನಾವರಣಗೊಳಿಸಿದ್ದಾರೆ.
ಫೆಬ್ರವರಿ 5-8 ರವರೆಗೆ ಡಿಫೆನ್ಸ್ ಎಕ್ಸ್ಪೋ ಅನ್ನು ಆಯೋಜಿಸಲಾಗುತ್ತಿದೆ.
“ವೆಬ್ಸೈಟ್ www.defexpo.gov.in ಪ್ರದರ್ಶಕರಿಗೆ ಆನ್ಲೈನ್ ಸೇವೆಗಳನ್ನು ಒದಗಿಸುತ್ತದೆ, ಜೊತೆಗೆ ಡಿಪಿಎಸ್ಯುಗಳು (ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ಸ್) ಮತ್ತು ಆರ್ಡನೆನ್ಸ್ ಫ್ಯಾಕ್ಟರಿಗಳ ಉತ್ಪನ್ನಗಳ ಪ್ರೊಫೈಲ್ಗಳ ಬಗ್ಗೆ ಮಾಹಿತಿಯುಕ್ತ ವಿಷಯವನ್ನು ಹೋಸ್ಟ್ ಮಾಡುತ್ತದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೆಬ್ಸೈಟ್ ಪ್ರದರ್ಶಕರಿಗೆ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆನ್ಲೈನ್ನಲ್ಲಿ ನೋಂದಾಯಿಸಲು ಮತ್ತು ಬುಕ್ ಮಾಡಲು, ಆನ್ಲೈನ್ ಪಾವತಿಗಳು, ಕಾನ್ಫರೆನ್ಸ್ ಹಾಲ್ ಅನ್ನು ಬುಕ್ ಮಾಡಲು ಮತ್ತು ಬ್ಯುಸಿನೆಸ್ ಟು ಬ್ಯುಸಿನೆಸ್ (ಬಿ 2 ಬಿ) ಸಭೆಗಳಿಗೆ ಸ್ಥಳಗಳನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ 31ಕ್ಕೂ ಮೊದಲು ವೆಬ್ಸೈಟ್ನಲ್ಲಿ ಜಾಗವನ್ನು ಕಾಯ್ದಿರಿಸುವ ಮೂಲಕ ಪ್ರದರ್ಶಕರು ಆರಂಭಿಕ ರಿಯಾಯಿತಿಯನ್ನು ಪಡೆಯಬಹುದು ಎಂದು ಅದು ಹೇಳಿದೆ.
ಫೆಬ್ರವರಿ 8 ರಂದು ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಸಾಮಾನ್ಯ ಸಂದರ್ಶಕರು ವೆಬ್ಸೈಟ್ನಲ್ಲಿ ಮೊದಲೇ ನೋಂದಾಯಿಸಿಕೊಳ್ಳಬೇಕು ಮತ್ತು ಅವರಿಗೆ ಇ-ಟಿಕೆಟ್ಗಳನ್ನು ಕಳುಹಿಸಲಾಗುವುದು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.