ನವದೆಹಲಿ: ಐಐಟಿ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಆವಿಷ್ಕಾರಗಳು, ತಂತ್ರಜ್ಞಾನಗಳು 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಐಐಟಿ-ಮದ್ರಾಸ್ ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಇಂದು ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಆಕಾಂಕ್ಷೆಯನ್ನು ಇಟ್ಟುಕೊಂಡಿದೆ. ನಿಮ್ಮ ಆವಿಷ್ಕಾರ, ಆಶೋತ್ತರ ಮತ್ತು ತಂತ್ರಜ್ಞಾನಗಳು ಈ ಕನಸಿಗೆ ನೀರೆರೆದು ಪೋಷಣೆ ಮಾಡುತ್ತದೆ. ಭಾರತವನ್ನು ಅತೀ ದೊಡ್ಡ ಸ್ಪರ್ಧಾತ್ಮಕ ಆರ್ಥಿಕತೆಯನ್ನಾಗಿಸಲು ಇದು ಸಹಕಾರಿಯಾಗುತ್ತದೆ” ಎಂದಿದ್ದಾರೆ.
ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಅವರು, ನವ ಭಾರತದ ಸ್ಫೂರ್ತಿಯನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದಿದ್ದಾರೆ. “ನನ್ನ ಎದುರು ಈಗ ಮಿನಿ ಭಾರತ ಮತ್ತು ನವ ಭಾರತದ ಸ್ಫೂರ್ತಿ ಇದೆ. ಇಲ್ಲಿ ಶಕ್ತಿ, ವೈವಿಧ್ಯತೆ ಮತ್ತು ಸಕಾರಾತ್ಮಕತೆ ಇದೆ. ಭವಿಷ್ಯದ ಕನಸುಗಳು ನಿಮ್ಮ ಕಣ್ಣುಗಳಲ್ಲಿ ನನಗೆ ಕಾಣಿಸುತ್ತಿದೆ. ಭಾರತದ ಅದೃಷ್ಟವನ್ನು ನಿಮ್ಮ ಕಣ್ಣುಗಳಲ್ಲಿ ನಾನು ನೋಡುತ್ತಿದ್ದೇನೆ” ಎಂದಿದ್ದಾರೆ.
ಐಐಟಿ-ಮದ್ರಾಸ್ ಅನ್ನು ಮಹತ್ವದ ಸಂಸ್ಥೆ ಎಂದು ಕರೆದಿರುವ ಮೋದಿ, ತಮಿಳುನಾಡು ತಮಿಳಿಗರ ತವರು, ಅದು ವಿಶ್ವದ ಅತ್ಯಂತ ಪ್ರಾಚೀನ ಭಾಷೆಯೂ ಹೌದು. “ಇದು ಅತ್ಯಂತ ಮಹತ್ವದ ಸಂಸ್ಥೆಯಾಗಿದೆ. ಇಲ್ಲಿ ಪರ್ವತಗಳು ಅಲುಗಾಡುತ್ತವೆ, ನದಿಗಳು ತಟಸ್ಥವಾಗುತ್ತವೆ. ಹಲವು ವಿಶೇಷತೆಯನ್ನು ಹೊಂದಿರುವ ತಮಿಳು ರಾಜ್ಯದಲ್ಲಿ ನಾವಿದ್ದೇವೆ. ವಿಶ್ವದ ಅತೀ ಪ್ರಾಚೀನ ಭಾಷೆಗೆ ಇದು ತವರು” ಎಂದಿದ್ದಾರೆ.
ಇಡೀ ಜಗತ್ತು ಭಾರತದತ್ತ ನೋಡುತ್ತಿರುವ ಸಮಯದಲ್ಲಿ ಪದವಿಯನ್ನು ಪಡೆಯುತ್ತಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಹೇಳಿದರು. “ನೀವು ನಿಜಕ್ಕೂ ಅದೃಷ್ಟವಂತರು, ಭಾರತವನ್ನು ಜಗತ್ತು ಅನನ್ಯ ಅವಕಾಶಗಳ ಭೂಮಿಯಾಗಿ ನೋಡುತ್ತಿರುವ ಸಮಯದಲ್ಲಿ ನೀವು ಅದ್ಭುತ ಸಂಸ್ಥೆಯೊಂದರಿಂದ ಪದವಿ ಪಡೆದು ಹೊರಬರುತ್ತಿದ್ದೀರಿ. ಯುಎಸ್ ಭೇಟಿಯ ಸಮಯದಲ್ಲಿ, ನಾನು ಅನೇಕ ರಾಜ್ಯಗಳ ಮುಖ್ಯಸ್ಥರು, ವ್ಯಾಪಾರ ಮುಖಂಡರು, ಅನ್ವೇಷಕರು, ಹೂಡಿಕೆದಾರರನ್ನು ಭೇಟಿಯಾದೆ. ನಮ್ಮ ಚರ್ಚೆಗಳಲ್ಲಿ, ಒಂದು ಅಂಶ ಸಾಮಾನ್ಯವಾಗಿತ್ತು ಅದೇನೆಂದರೆ ನವ ಭಾರತದ ಬಗ್ಗೆ ಆಶಾವಾದವಾಗಿರುವುದು” ಎಂದು ಪ್ರಧಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.