ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನವು ಭಾರತೀಯ ಸಮಾಜದ ನೈರ್ಮಲ್ಯದ ಬಗೆಗಿನ ಧೋರಣೆಯನ್ನು ಬದಲಾಯಿಸಿದೆ. ಹೀಗಾಗಿ ಇದು ಜಗತ್ತಿಗೆ ಉದಾಹರಣೆಯಾಗಬಲ್ಲ ಕಾರ್ಯಕ್ರಮ ಮತ್ತು ಗೇಮ್ ಚೇಂಜರ್ ಆಗಿದೆ ಎಂದು ಯುನಿಸೆಫ್ನ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಯುನಿಸೆಫ್ ಇಂಡಿಯಾ ಸ್ಯಾನಿಟೇಶನ್ (WASH) ಮುಖ್ಯಸ್ಥ ನಿಕೋಲಸ್ ಓಸ್ಬರ್ಟ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 2014 ರಲ್ಲಿ ಕೆಂಪು ಕೋಟೆಯ ಮೇಲೆ ನಿಂತು ಘೋಷಣೆ ಮಾಡಿದ ಕಾರ್ಯಕ್ರಮದ ಬಗ್ಗೆ ಅತೀವ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
“ಐದು ವರ್ಷಗಳ ಹಿಂದೆ, ಭಾರತದ ಆಡಳಿತ ಮತ್ತು ಜನರೊಂದಿಗೆ ಬಯಲು ಶೌಚದ ಬಗ್ಗೆ ಮುಕ್ತವಾಗಿ ಮಾತನಾಡುವುದು ಕಷ್ಟ ಎಂದು ನನಗೆ ತಿಳಿಸಲಾಗಿತ್ತು. ಆದರೆ ಸ್ವಚ್ಛ ಭಾರತ ಅಭಿಯಾನದ ನಂತರ, ಮುಖ್ಯಮಂತ್ರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಕೂಡ ಮುಕ್ತ ಮಲವಿಸರ್ಜನೆ ವಿರುದ್ಧ ಭಾರತದಲ್ಲಿ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ” ಎಂದಿದ್ದಾರೆ.
“ಐದು ವರ್ಷಗಳ ಅವಧಿಯಲ್ಲಿ, ರಾಷ್ಟ್ರದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿದರೆ ಸ್ವಚ್ಛ ಭಾರತ ಅಭಿಯಾನದ ಯಶಸ್ಸು ವಿಶ್ವ ದಾಖಲೆಯಾಗಿದೆ. ಖಂಡಿತವಾಗಿಯೂ ಇದು ವಿಶ್ವ ದಾಖಲೆಯೇ ಆಗಬೇಕು” ಎಂದು ಓಸ್ಬರ್ಟ್ ಪ್ರತಿಪಾದಿಸಿದ್ದಾರೆ.
“ಯುದ್ಧವು ಗೆದ್ದಿದೆ ಎಂದು ನಾನು ನಂಬುತ್ತೇನೆ, ಆದರೆ ಭಾರತವು ಅಭಿಯಾನದ ಧ್ಯೇಯದೊಂದಿಗೆ ಮುಂದುವರಿಯಬೇಕು ಮತ್ತು ನೈರ್ಮಲ್ಯದ ಇತರ ಅಂಶಗಳತ್ತವೂ ಗಮನಹರಿಸಬೇಕು” ಎಂದು ಅವರು ಒತ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.