ನವದೆಹಲಿ: ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾವು ಭಾರತದಲ್ಲಿ 10 ಬಿಲಿಯನ್ ಡಾಲರ್ ದೀರ್ಘಾವಧಿ ಹೂಡಿಕೆ ಮಾಡುವತ್ತ ಗಮನ ಹರಿಸುತ್ತಿದೆ.
ಭಾರತದ ಪ್ರಗತಿ ಸಂಭಾವ್ಯತೆಯನ್ನು ಮುಂದಿಟ್ಟುಕೊಂಡು ಪೆಟ್ರೋಕೆಮಿಕಲ್ಸ್, ಮೂಲಭೂತ ಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮಾಡಲು ಸೌದಿ ಚಿಂತನೆ ನಡೆಸುತ್ತಿದೆ. ಭಾರತವು ಸೌದಿ ಅರೇಬಿಯಾಗೆ ಅತ್ಯಂತ ಆಕರ್ಷಕ ಹೂಡಿಕೆ ತಾಣವಾಗಿದೆ ಮತ್ತು ನವದೆಹಲಿಯೊಂದಿಗೆ ದೀರ್ಘಾವಧಿ ಪಾಲುದಾರಿಕೆಯನ್ನು ಮಾಡಿಕೊಳ್ಳುವತ್ತ ಸೌದಿಯು ಚಿಂತನೆಯ ನಡೆಸುತ್ತಿದೆ ಎಂದು ಅಲ್ಲಿನ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಹೇಳಿದ್ದಾರೆ.
“ಶಕ್ತಿ, ಸಂಸ್ಕರಣೆ, ಮೂಲಸೌಕರ್ಯ, ಪೆಟ್ರೋಕೆಮಿಕಲ್ಸ್, ಕೃಷಿ, ಮಿನರಲ್ಸ್ ಮತ್ತು ಮೈನಿಂಗ್ ವಲಯಗಳಲ್ಲಿ ಸೌದಿ ಅರೇಬಿಯಾ 100 ಬಿಲಿಯನ್ ಡಾಲರ್ ಹೂಡಿಕೆಯನ್ನು ಭಾರತದಲ್ಲಿ ಮಾಡಲು ಎದುರು ನೋಡುತ್ತಿದೆ” ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ತೈಲ ದಿಗ್ಗಜ ಸಂಸ್ಥೆ ಅರಮ್ಕೊ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನೊಂದಿಗೆ ಇಂಧನ ವಲಯದಲ್ಲಿ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಈಗಾಗಲೇ ಪ್ರಸ್ತಾಪಿಸಿದೆ. ಅಲ್ಲದೆ ಅರಮ್ಕೋ ಭಾರತದ ಇಂಧನ ವಲಯದಲ್ಲಿ 44 ಬಿಲಿಯನ್ ಡಾಲರ್ ಹೂಡಿಕೆಯನ್ನು ಮಾಡಲು ನಿರ್ಧರಿಸಿದೆ.
“ಈ ಹಿನ್ನೆಲೆಯಲ್ಲಿ, ಸೌದಿ ಅರಾಮ್ಕೊ ಭಾರತದ ಇಂಧನ ಕ್ಷೇತ್ರದಲ್ಲಿ 44 ಬಿಲಿಯನ್ ಡಾಲರ್ ವೆಸ್ಟ್ ಕೋಸ್ಟ್ ರಿಫೈನರಿ ಮತ್ತು ಮಹಾರಾಷ್ಟ್ರದ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಮೇಲೆ ಹೂಡಿಕೆ ಮಾಡಲು ಮುಂದಾಗಿದೆ ಮತ್ತು ರಿಲಯನ್ಸ್ ಜೊತೆಗೆ ದೀರ್ಘಾವಧಿಯ ಸಹಭಾಗಿತ್ವವನ್ನು ಸಾಧಿಸಿಲು ನಿರ್ಧರಿಸಿದೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಕಾರ್ಯತಾಂತ್ರಿಕ ಮೈಲಿಗಲ್ಲುಗಳನ್ನು ತರುತ್ತದೆ” ಎಂದು ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಹೇಳಿದ್ದಾರೆ.
ಸೌದಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ 2030 ದೃಷ್ಟಿಕೋನ ಸಹ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರವನ್ನು ಗಮನಾರ್ಹವಾಗಿ ವಿಸ್ತರಿಸಲು ಕಾರಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
2030ರ ದೃಷ್ಟಿಕೋನದಡಿಯಲ್ಲಿ, ಸೌದಿ ಅರೇಬಿಯಾ ತನ್ನ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಯೋಜಿಸುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.