ನವದೆಹಲಿ: ಜಮ್ಮು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ನರನಾಗ್ ಗ್ರಾಮದಲ್ಲಿ ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಈ ಪ್ರದೇಶದಲ್ಲಿ ಉಗ್ರರು ಮತ್ತು ಸೇನೆಯ ನಡುವೆ ದೀರ್ಘಕಾಲ ಗುಂಡಿನ ಚಕಮಕಿ ಜರುಗಿತ್ತು.
ಹತ್ಯೆಗೀಡಾದ ಮೂವರು ಉಗ್ರರು ಕೂಡ ಸ್ಥಳೀಯರಲ್ಲ, ಅವರು ಬೇರೆ ದೇಶಕ್ಕೆ ಸೇರಿದವರೆಂದು ಸೇನೆ ಹೇಳಿದೆ. ಮೃತರಿಂದ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರದೇಶದಲ್ಲಿ ಪ್ರಸ್ತುತ ಭಾರೀ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಇಲ್ಲಿ ಸಂಚರಿಸುವ ವಾಹನಗಳನ್ನೂ ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.
ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಹಿಂಪಡೆದ ಬಳಿಕ ಆ ರಾಜ್ಯದಲ್ಲಿ ದುಷ್ಕೃತ್ಯವನ್ನು ಎಸಗಲು ಉಗ್ರರು ನಿರಂತರವಾಗಿ ಹವಣಿಸುತ್ತಿದ್ದಾರೆ. ಆದರೆ ಪ್ರತಿ ಬೆಳವಣಿಗೆಯ ಮೇಲೂ ನಿರಂತರವಾಗಿ ಕಣ್ಣಿಟ್ಟಿರುವ ಸೇನೆ ಉಗ್ರರು ಬಾಲ ಬಿಚ್ಚದಂತೆ ನೋಡಿಕೊಳ್ಳುತ್ತಿದೆ.
ವಿಶ್ವಸಂಸ್ಥೆಯಲ್ಲಿನ ಭಾಷಣದ ವೇಳೆಯಲ್ಲೂ ಮೋದಿಯವರು ಉಗ್ರವಾದದ ವಿರುದ್ಧ ಭಾರತ ಬದ್ಧತೆಯೊಂದಿಗೆ ಹೋರಾಡಲಿದೆ ಎಂದಿದ್ದರು. ಅಲ್ಲದೇ ಪಾಕಿಸ್ಥಾನಕ್ಕೂ ದಿಟ್ಟ ಸಂದೇಶವನ್ನು ರವಾನೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.