ನವದೆಹಲಿ: ಭಾರತೀಯ ನೌಕಾಪಡೆಯ ಅಂಡರ್ ವಾಟರ್ ಯುದ್ಧ ಸಾಮರ್ಥ್ಯವನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ಮುಂಬಯಿಯಲ್ಲಿ ಸೆಕೆಂಡ್ ಕಲ್ವೇರಿ ಕ್ಲಾಸ್ ಜಲಾಂತರ್ಗಾಮಿ ಐಎಸ್ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ್ದಾರೆ.
ಮಝಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ಸೆ. 19 ರಂದು ಈ ಜಲಾಂತರ್ಗಾಮಿಯನ್ನು ನೌಕೆಗೆ ಹಸ್ತಾಂತರ ಮಾಡಿತ್ತು. ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಐಎನ್ಎಸ್ ಖಂಡೇರಿಯು ನಿಖರ-ನಿರ್ದೇಶಿತ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿ ಶತ್ರುಗಳ ಮೇಲೆ ರಹಸ್ಯ ಮತ್ತು ಬಲಿಷ್ಠ ದಾಳಿಯನ್ನು ನಡೆಸುವ ಸಾಮರ್ಥ್ಯವನ್ನು ಒಳಗೊಂಡಿವೆ.
ಸ್ಕಾರ್ಪೀನ್ ವರ್ಗದ ಮೊದಲ ಜಲಾಂತರ್ಗಾಮಿ ಐಎನ್ಎಸ್ ಕಲ್ವೇರಿಯನ್ನು ಡಿಸೆಂಬರ್ 14, 2017 ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು.
ಫ್ರೆಂಚ್ ಕಂಪನಿ ನೇವಲ್ ಗ್ರೂಪ್ (ಹಿಂದೆ ಡಿಸಿಎನ್ಎಸ್ ಎಂದು ಕರೆಯಲಾಗುತ್ತಿತ್ತು) ವಿನ್ಯಾಸಗೊಳಿಸಿದ ಖಂಡೇರಿಗೆ ಹಿಂದೂ ಮಹಾಸಾಗರದ ಮೀನೊಂದರ ಹೆಸರನ್ನು ಇಡಲಾಗಿದೆ. ಇದು ಕಾರ್ಯಾರಂಭ ಮಾಡಿದ ನಂತರ ಇದು ಭಾರತೀಯ ನೌಕಾಪಡೆಯ 17 ನೇ ಜಲಾಂತರ್ಗಾಮಿ ಆಗಲಿದೆ. ಎಂಟು ಅಧಿಕಾರಿಗಳು ಮತ್ತು 35 ನಾವಿಕರು ನಿರ್ವಹಿಸಲಿರುವ ಖಂಡೇರಿ 50 ದಿನಗಳ ಕಾಲ ಸಮುದ್ರದಲ್ಲಿ ಉಳಿಯಬಲ್ಲದು.
ಐಎನ್ಎಸ್ ಖಂಡೇರಿ ಸಮುದ್ರದ ಮೇಲ್ಮೈಯಲ್ಲಿ 1,615 ಟನ್ ಸರಕು ಮತ್ತು ಮುಳುಗಿದಾಗ 1,775 ಟನ್ ಸ್ಥಳಾಂತರಿಸುವ ಸಾಮರ್ಥ್ಯವನ್ನು ಹೊಂದಿದೆ. 67.5 ಮೀಟರ್ ಉದ್ದದ ಐಎನ್ಎಸ್ ಖಂಡೇರಿ ನಾಲ್ಕು MTU 12V 396 SE84 ಡೀಸೆಲ್ ಎಂಜಿನ್ ಮತ್ತು 360 ಬ್ಯಾಟರಿ ಸೆಲ್ಗಳಿಂದ ನಿಯಂತ್ರಿಸಲ್ಪಡುತ್ತದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಈ ಜಲಾಂತರ್ಗಾಮಿ ನೌಕೆಯಲ್ಲಿ ಎಂಟು ಅಧಿಕಾರಿಗಳು ಮತ್ತು 35 ನಾವಿಕರು ಇರಲಿದ್ದಾರೆ. ಇದು ಆರು ಟ್ಯೂಬ್ಗಳಿಂದ ಪೈಯರ್ ಮಾಡಬಹುದಾದ 18 ಎಸ್ಯುಟಿ ಟಾರ್ಪಿಡೊಗಳೊಂದಿಗೆ ಶಸ್ತ್ರಸಜ್ಜಿತವಾಗಲಿದೆ, ಸಮುದ್ರ-ಸ್ಕಿಮ್ಮಿಂಗ್ ಎಕ್ಸೊಸೆಟ್ ಹಡಗು ವಿರೋಧಿ ಕ್ಷಿಪಣಿಗಳನ್ನು ಹೊಂದಿರಲಿದೆ. ಟಾರ್ಪಿಡೊಗಳ ಬದಲಿಗೆ ಇದು 30 ಆ್ಯಂಟಿ ಶಿಪ್ ಮೈನ್ಗಳನ್ನು ಸಹ ಇದು ಸಾಗಿಸಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.