ನ್ಯೂಯಾರ್ಕ್: ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಿರುವ ಮುಹಾಜಿರ್ ಹೋರಾಟಗಾರ್ತಿ ಕಖಸ್ಹಾನ್ ಹೈದರ್ ಅವರು, ಐಎಸ್ಐ ಮತ್ತು ಪಾಕಿಸ್ಥಾನದ ಸೇನೆಯಿಂದ ತಮ್ಮನ್ನು ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅಮೇರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
“ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಮತ್ತು ಆ ದೇಶಕ್ಕೆ ಎಲ್ಲಾ ತರದ ಅನುದಾನವನ್ನು ಸ್ಥಗಿತಗೊಳಿಸಬೇಕು. ಅದು ಭಯೋತ್ಪಾದಕ ರಾಷ್ಟ್ರ. ಪಾಕಿಸ್ಥಾನವು ಜಗತ್ತಿನ ಮೂಲೆಮೂಲೆಗೂ ಭಯೋತ್ಪಾದನೆಯನ್ನು ಪಸರಿಸಿದೆ. ನಮ್ಮನ್ನು ಪಾಕಿಸ್ಥಾನದ ಸೇನೆ ಮತ್ತು ಐಎಸ್ಐನಿಂದ ರಕ್ಷಿಸಿ ಎಂದು ನಾನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿಯನ್ನು ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.
ಪಾಕಿಸ್ಥಾನ ರಚನೆಯಾದಾಗಿನಿಂದಲೂ ಅಲ್ಪಸಂಖ್ಯಾತರಿಗೆ ಸಮಾಧಿಯಾಗಿ ಪರಿಣಮಿಸಿದೆ. ಅಲ್ಲಿ ಸಾವಿರಾರು ಮಂದಿ ಅಲ್ಪಸಂಖ್ಯಾತರ ಕೊಲೆಯಾಗಿದೆ ಮತ್ತು ಅನೇಕ ಮಂದಿಯ ಅಪಹರಣವಾಗಿದೆ. ಸಿಂಧಿ, ಬಲೂಚಿ, ಹಿಂದೂ, ಸಿಖ್, ಮುಹಜಿರ್, ಕ್ರಿಶ್ಚಿಯನ್, ಶಿಯಾ ಹೀಗೆ ಅನೇಕರನ್ನು ಅದು ಜೈಲಿಗಟ್ಟಿ ಚಿತ್ರಹಿಂಸೆ ನೀಡುತ್ತಿದೆ ಎಂದಿದ್ದಾರೆ.
ತನ್ನ ಸಮುದಾಯದವರು ಪಾಕಿಸ್ಥಾನದ ದೌರ್ಜನ್ಯಗಳ ವಿರುದ್ಧ ಜಗತ್ತಿನ ಗಮನವನ್ನು ಸಲುವಾಗಿ ನ್ಯೂಯಾರ್ಕ್ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದಿದ್ದಾರೆ.
ಪಾಕಿಸ್ಥಾನವು ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿಶ್ವವೇದಿಕೆಯಲ್ಲಿ ಆರೋಪಿಸುತ್ತಿರುವ ಸಂದರ್ಭದಲ್ಲಿ ಹೈದರ್ ಅವರ ಹೇಳಿಕೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.