ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಶಿಕ್ಷಣವನ್ನು ಉನ್ನತೀಕರಿಸಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ 16 ಪದವಿ ಮತ್ತು ನಾಲ್ಕು ವೃತ್ತಿಪರ ಕಾಲೇಜುಗಳನ್ನು ಸ್ಥಾಪನೆ ಮಾಡುತ್ತಿದೆ.
ಒಂದು ಆಡಳಿತಾತ್ಮಕ ಕಾಲೇಜನ್ನು ಸಹ ಅಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್) ತಿಳಿಸಿದೆ. ಕಾಲೇಜು ಸ್ಥಾಪನೆಗಾಗಿ ಭೂಮಿಯನ್ನು ಗುರುತಿಸುವ ಪ್ರಕ್ರಿಯೆಯ ಪ್ರಗತಿಯನ್ನು ವಿಭಾಗೀಯ ಆಯುಕ್ತರು ಬುಧವಾರ ಪರಿಶೀಲಿಸಿದ್ದಾರೆ.
“ಕಣಿವೆಯಲ್ಲಿ 16 ಪದವಿ, 4 ವೃತ್ತಿಪರ, ಒಂದು ಆಡಳಿತಾತ್ಮಕ ಕಾಲೇಜು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಭೂ ಗುರುತಿನ ಪ್ರಕ್ರಿಯೆಯ ಪ್ರಗತಿಯನ್ನು ವಿಭಾಗೀಯ ಆಯುಕ್ತರು ಪರಿಶೀಲಿಸಿದ್ದಾರೆ” ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್ ಮಾಡಿದೆ.
ಇಲಾಖೆಯ ಪ್ರಕಾರ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿವೇತನ ನಮೂನೆಗಳನ್ನು ಸಲ್ಲಿಸುವ ಸಲುವಾಗಿ, ಸರ್ಕಾರವು ಇಲ್ಲಿನ ವಿದ್ಯಾರ್ಥಿಗಳಿಗಾಗಿ ಪ್ರತಿ ಜಿಲ್ಲಾ ಕಲೆಕ್ಟರ್ (ಡಿಸಿ) ಕಚೇರಿಯಲ್ಲಿ ವೃತ್ತಿಪರ ಸಿಬ್ಬಂದಿಯನ್ನು ಒಳಗೊಂಡ ಮೂರು ಇಂಟರ್ನೆಟ್ ಕಿಯೋಸ್ಕಗಳನ್ನು ಸ್ಥಾಪಿಸುತ್ತಿದೆ.
ಈ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಸರ್ಕಾರವು 325 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಈಗಾಗಲೇ ಕಣಿವೆ ಪ್ರದೇಶದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನೂ ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲಡಾಖ್ನ ಲೇಹ್ ಜಿಲ್ಲೆಗೆ ಹೊಸ ವೈದ್ಯಕೀಯ ಕಾಲೇಜನ್ನು ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.