ನವದೆಹಲಿ: ಕ್ಷಯ ರೋಗ ಮುಕ್ತ ಭಾರತವನ್ನು ನಿರ್ಮಾಣ ಮಾಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬೃಹತ್ ಅಭಿಯಾನವನ್ನು ಆರಂಭಿಸಿದೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಬುಧವಾದ ನವದೆಹಲಿಯಲ್ಲಿ “ಟಿಬಿ ಹಾರೇಗ ದೇಶ್ ಜೀತೇಗ’ ಎಂಬ ದೇಶವ್ಯಾಪಿ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದಾರೆ. ಈ ವೇಳೆ ನ್ಯಾಷನಲ್ ಟಿಬಿ ಪ್ರಿವಲೆನ್ಸ್ ಸರ್ವೇಗೂ ಆರಂಭವನ್ನು ನೀಡಿದ್ದಾರೆ.
ಆರೋಗ್ಯ ಸಚಿವರು ನ್ಯಾಷನಲ್ ಟಿಬಿ ಪ್ರಿವಲೆನ್ಸ್ ಸರ್ವೇಯ ವಾಹನಕ್ಕೆ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಚಾಲನೆಯನ್ನು ನೀಡಿದರು. 25 ವಾಹನಗಳು ಸರ್ವೇಗಾಗಿ ಕಾರ್ಯನಿರ್ವಹಣೆ ಮಾಡಲಿವೆ. ದೇಶದಾದ್ಯಂತ 6 ತಿಂಗಳುಗಳ ಕಾಲ ಸರ್ವೇ ನಡೆಯಲಿದೆ. ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ದತ್ತಾಂಶಗಳನ್ನು ಇದು ಪ್ರಸ್ತುತಪಡಿಸಲಿದೆ. ಇವುಗಳನ್ನು ಮುಂದಿನ ಕ್ರಮಗಳಿಗೆ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತದೆ.
“ಟಿಬಿ ಹಾರೇಗಾ ದೇಶ್ ಜೀತೇಗಾ’ ಅಭಿಯಾನವು ದೇಶದಾದ್ಯಂತ ಟಿಬಿ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಲಿದೆ.
ಡಾ. ಹರ್ಷವರ್ಧನ್ ಅವರು, ಟಿಬಿ ಇಂಡಿಯಾ ರಿಪೋರ್ಟ್ (2019), ವರ್ಕ್ಪ್ಲೇಸ್ ಪಾಲಿಸಿ ಫ್ರೇಮ್ವರ್ಕ್ ಫಾರ್ ಟಿಬಿ, ಆಪರೇಶನಲ್ ಗೈಡ್ಲೈನ್ ಫಾರ್ ಎಂಪ್ಲಾಯರ್ ಲೆಡ್ ಮಾಡೆಲ್ ಆನ್ ಟಿಬಿ, ಟಿಬಿಯಲ್ಲಿ ಬದುಕುಳಿದವರನ್ನು ಟಿಬಿ ಚಾಂಪಿಯನ್ ಆಗಿ ಪರಿವರ್ತಿಸುವ ತರಬೇತಿ ಮಾಡೆಲ್ ಮತ್ತು ಚುನಾಯಿತ ಪ್ರತಿನಿಧಿಗಳ ಟಿಬಿ ಕೈಪಿಡಿಯನ್ನೂ ಸಹ ಬಿಡುಗಡೆ ಮಾಡಿದ್ದಾರೆ.
ಇವುಗಳ ಜೊತೆಗೆ, ಒಂದು ಪ್ರಮುಖ ಹೆಜ್ಜೆಯಾಗಿ, ಮಲ್ಟಿ ಡ್ರಗ್ ರೆಸಿಸ್ಟೆಂಟ್ ಟಿಬಿ ರೋಗಿಗಳಿಗಾಗಿ ಆಲ್ ಓರಲ್ ರಿಜಿಮನ್ ಕಿಟ್ ಅನ್ನು ಸಹ ಪ್ರಾರಂಭಿಸಿದರು. ಇದು ನೋವು ಮತ್ತು ಅಡ್ಡಪರಿಣಾಮಗಳನ್ನು ಒಹೊಂದಿರುವ ಚುಚ್ಚುಮದ್ದನ್ನು ಒಳಗೊಂಡಿಲ್ಲ. 9 ರಾಜ್ಯಗಳಲ್ಲಿ ಟಿಬಿ ನಿರ್ಮೂಲನೆಯ ಕಾರ್ಯವನ್ನು ವೇಗಗೊಳಿಸಲು ವಿಶ್ವ ಬ್ಯಾಂಕಿನ ಸಹಭಾಗಿತ್ವದಲ್ಲಿ 400 ಮಿಲಿಯನ್ ಡಾಲರ್ ಸಾಲವನ್ನು ಪಡೆಯುವುದಾಗಿ ಅವರು ಘೋಷಿಸಿದರು.
ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳು ಟಿಬಿಯನ್ನು ನಿಭಾಯಿಸುವಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಕ್ಕಾಗಿ ಸಚಿವರಿಂಧ ಪ್ರಶಸ್ತಿಯನ್ನು ಪಡೆದುಕೊಂಡಿವೆ. ತ್ರಿಪುರ ಮತ್ತು ಸಿಕ್ಕಿಂ ರಾಜ್ಯಗಳ ಪ್ರಯತ್ನಗಳು ಗುರುತಿಸಲ್ಪಟ್ಟಿವೆ. ಪುದುಚೇರಿ, ಮತ್ತು ದಮನ್ ಮತ್ತು ಡಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜ್ಯಗಳೆಂದು ಪರಿಗಣಿತವಾಗಿವೆ.
Union Minister for Health & Family Welfare, Science & Technology, and Earth Sciences @drharshvardhan launches the ‘TB Harega Desh Jeetega’ campaign, in New Delhi pic.twitter.com/PGGtNofUV5
— PIB India (@PIB_India) September 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.