ಉಫಾ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ಬಂದಿಳಿಯಲಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್ಸಿಓ) ಸಮಿತ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಬ್ರಿಕ್ಸ್ ಸಮಿತ್ನ ಸಂದರ್ಭದಲ್ಲಿ ಮೋದಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಚೀನಾ ಪ್ರಧಾನಿ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಎಸ್ಸಿಓ ಸಮಿತ್ ಜುಲೈ9ರಿಂದ 10ರವರೆಗೆ ನಡೆಯಲಿದ್ದು, ಇದರ ಸದಸ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಕಜಕೀಸ್ತಾನ, ಖರ್ಗೀಸ್ತಾನ, ಉಜ್ಬೇಕಿಸ್ತಾನ ಮತ್ತು ತಜಕೀಸ್ತಾನಗಳು ಸಮಿತ್ನಲ್ಲಿ ಭಾಗವಹಿಸಲಿವೆ. ಭಾರತವೂ ಇದರ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದೆ.
ಮೋದಿ ಸಿಎಸ್ಓ ಸಮಿತ್ನಲ್ಲಿ ಪಾಲ್ಗೊಳ್ಳಲಿದ್ದು, ಈ ಮೂಲಕ ಇದರಲ್ಲಿ ಪಾಲ್ಗೊಂಡ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.
ಮುಂದಿನ ವರ್ಷದೊಳಗೆ ಭಾರತ ಮತ್ತು ಪಾಕಿಸ್ಥಾನವೂ ಇದರ ಸದಸ್ಯತ್ವವನ್ನು ಪಡೆದುಕೊಳ್ಳಲಿದೆ. ಈ ಬಗೆಗಿನ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ರಷ್ಯಾ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.