ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮಾತುಕತೆ ನಡೆಸಿದ ವೇಳೆ ಅರ್ಥಹೀನ ಪ್ರಶ್ನೆ ಕೇಳಿದ ಪಾಕಿಸ್ಥಾನದ ವರದಿಗಾರನನ್ನು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಇದು ಇಮ್ರಾನ್ ಖಾನ್ ಅವರ ಮುಖ ಕೆಂಪಾಗುವಂತೆ ಮಾಡಿದೆ.
ಸೋಮವಾರ ಉಭಯ ಮುಖಂಡರ ಮಾತುಕತೆ ನಡೆಯುತ್ತಿದ್ದ ವೇಳೆ, ಪಾಕಿಸ್ಥಾನದ ಪತ್ರಕರ್ತನೊಬ್ಬ ಟ್ರಂಪ್ ಅವರನ್ನು ಉದ್ದೇಶಿಸಿ, “ನೀವು ಖಾನ್ ತಂಡದವರಾ?” ಎಂದು ಪ್ರಶ್ನಿಸಿದ್ದಾನೆ.
ಇದಕ್ಕೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದ ಟ್ರಂಪ್, ಇಂತಹ ಪತ್ರಕರ್ತರನ್ನು ನೀವು ಎಲ್ಲಿಂದ ತರುತ್ತೀರಿ? ಎಂದು ಖಾನ್ ಅವರನ್ನು ಪ್ರಶ್ನಿಸಿದ್ದಾರೆ. ಇದು ಖಾನ್ ಅವರಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಇಲ್ಲಿಗೆ ನಿಲ್ಲಿಸದ ಪತ್ರಕರ್ತ, ಟ್ರಂಪ್ ಅವರಿಗೆ ಜಮ್ಮು ಕಾಶ್ಮೀರದ ವಿಷಯದ ಬಗ್ಗೆ ಪ್ರಶ್ನೆ ಕೇಳುವುದನ್ನು ಮುಂದುವರೆಸುತ್ತಲೇ ಇದ್ದ. ಇದರಿಂದ ಸುಸ್ತಾದ ಟ್ರಂಪ್, ನೀವು ಪ್ರಶ್ನೆ ಕೇಳುತ್ತಿಲ್ಲ ಬದಲಿಗೆ ಹೇಳಿಕೆ ನೀಡುತ್ತಿದ್ದೀರಿ ಎಂದರು. ಈ ಸಂದರ್ಭದಲ್ಲಿ ಪಾಕ್ ಮಾಧ್ಯಮಗಳು ತುಸು ಕ್ಷಣ ರೆಕಾರ್ಡಿಂಗ್ ನಿಲ್ಲಿಸಿವೆ.
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧನಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ, ಆದರೆ ಭಾರತ ಮತ್ತು ಪಾಕಿಸ್ಥಾನ ಎರಡೂ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕೆಂದು ಬಯಸಿದರೆ ಮಾತ್ರ ಅದನ್ನು ಮಾಡುತ್ತೇನೆ ಎಂದು ಒತ್ತಿ ಹೇಳಿದ್ದಾರೆ. “ನಾನು ಸಿದ್ಧ ಮತ್ತು ಸಮರ್ಥ. ಇದು ಒಂದು ಸಂಕೀರ್ಣ ವಿಷಯವಾಗಿದೆ. ಇದು ಬಹಳ ಸಮಯದಿಂದಲೂ ನಡೆಯುತ್ತಿದೆ. ಆದರೆ ಇಬ್ಬರೂ ಬಯಸಿದರೆ ಮಾತ್ರ ನಾನು ಮಧ್ಯಸ್ಥಿಕೆ ಮಾಡಲು ಸಿದ್ಧನಾಗುತ್ತೇನೆ” ಎಂದು ಟ್ರಂಪ್ ಹೇಳಿದ್ದಾರೆ.
ಜಮ್ಮು ಕಾಶ್ಮೀರ ವಿಷಯದಲ್ಲಿ ಯಾರ ಮಧ್ಯಸ್ಥಿಕೆಯನ್ನೂ ಬಯಸುವುದಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.