ಬೆಂಗಳೂರು: ಸೆಪ್ಟೆಂಬರ್ 1 ರಿಂದ ದೇಶದಾದ್ಯಂತ ಅನುಷ್ಠಾನಕ್ಕೆ ಬಂದಿರುವ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿನ ನೂತನ ಸಂಚಾರಿ ನಿಯಮ ಉಲ್ಲಂಘನೆ ದಂಡಗಳ ಮೊತ್ತವನ್ನು ಕರ್ನಾಟಕ ಸರಕಾರ ಶನಿವಾರದಿಂದ ಕಡಿಮೆ ಮಾಡಿದೆ.
ವರದಿಗಳ ಪ್ರಕಾರ, ಸಾರಿಗೆ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಕೇಂದ್ರ ಸರಕಾರದ ಸಂಚಾರಿ ದಂಡದ ಬಗೆಗಿನ ಅಧಿಸೂಚನೆಯನ್ನು ಪರಿಶೀಲನೆ ನಡೆಸುವಂತೆ ಮತ್ತು ದಂಡದ ಮೊತ್ತವನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸೂಚನೆಯನ್ನು ನೀಡಿದ್ದರು. ಅದರಂತೆ ಸಂಚಾರಿ ದಂಡವನ್ನು ಕಡಿಮೆ ಮಾಡಲಾಗಿದೆ.
ನೂತನ ಪರಿಷ್ಕೃತ ದರ ಹೀಗಿದೆ
⭕ ವೇಗದ ಸಂಚಾರಕ್ಕೆ ದ್ವಿಚಕ್ರ ವಾಹನಗಳಿಗೆ ರೂ. 1000 ಮತ್ತು ದೊಡ್ಡ ವಾಹನಗಳಿಗೆ 2000 ರೂಪಾಯಿ ದಂಡ.
⭕ ಅಪಾಯಕಾರಿ ಸಂಚಾರಕ್ಕೆ ರೂಪಾಯಿ 1500 ರಿಂದ 3 ಸಾವಿರ ರೂಪಾಯಿವರೆಗೆ ದಂಡ.
⭕ ಹೆಲ್ಮೆಟ್ ಧರಿಸದೆ ಇದ್ದರೆ 500 ರೂಪಾಯಿ ದಂಡ.
⭕ ಸೇಫ್ಟಿ ಬೆಲ್ಟ್ ಧರಿಸದೆ ಇದ್ದರೆ 500 ರೂಪಾಯಿ ದಂಡ.
⭕ ಆಂಬುಲೆನ್ಸ್ಗೆ ಜಾಗ ಮಾಡಿಕೊಡದಿದ್ದರೆ 1000 ರೂಪಾಯಿ ದಂಡ.
⭕ ವಿಮೆ ಇಲ್ಲದಿದ್ದರೆ ಸಣ್ಣ ವಾಹನಗಳಿಗೆ 2000 ದಿಂದ 3000 ಸಾವಿರ ರೂಪಾಯಿವರೆಗೆ ದಂಡ.
⭕ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದರೆ 1,500 ರೂಪಾಯಿವರೆಗೆ ದಂಡ.
⭕ ಪರವಾನಗಿ ಇಲ್ಲದೆ ಚಾಲನೆ ಮಾಡಿದರೆ ರೂ. 1,000 ದಿಂದ ರೂ. 5,000 ದ ವರೆಗೆ ದಂಡ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.