ನವದೆಹಲಿ: 2022ರ ಗಣರಾಜ್ಯೋತ್ಸವ ಪೆರೇಡ್ ನವೀಕೃತ ರಾಜಪಥದಲ್ಲಿ ನಡೆಯಲಿದೆ. ರಾಷ್ಟ್ರಪತಿ ಭವನದಿಂದ ವಿಜಯ್ ಚೌಕ್ ಮತ್ತು ಇಂಡಿಯಾ ಗೇಟ್ ಮೂಲಕ ಸಾಗುವ ಮಧ್ಯ ದೆಹಲಿಯ ಸಮಾರಂಭ ಜರುಗುವ ಸ್ಥಳದಲ್ಲಿ ಪರೇಡ್ ನಡೆಯುತ್ತದೆ.
2021 ರ ನವೆಂಬರ್ ವೇಳೆಗೆ ರಾಜ್ಪಥದ ನವೀಕರಣವನ್ನು ಪೂರ್ಣಗೊಳಿಸಲು ಕೇಂದ್ರ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಪೆರೇಡ್ ಪ್ರತಿವರ್ಷ ಜನವರಿ 26 ರಂದು ಇಂಡಿಯಾ ಗೇಟ್ನ ರಾಜ್ಪಥದಲ್ಲಿ ನಡೆಯುತ್ತದೆ. ಇದು ಪ್ರೆಸಿಡೆಂಟ್ ಎಸ್ಟೇಟ್ ಸಮೀಪದ ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಹಿಲ್ನಿಂದ ಪ್ರಾರಂಭವಾಗುತ್ತದೆ ಮತ್ತು ಇದು ಇಂಡಿಯಾ ಗೇಟ್ನಲ್ಲಿ ಕೊನೆಗೊಳ್ಳುತ್ತದೆ.
ಎನ್ಡಿಎ ಸರ್ಕಾರವು ರಾಜಧಾನಿಯನ್ನು ನವೀಕರಿಸುವ ಯೋಜನೆಯನ್ನು ಪ್ರಕಟಿಸಿದೆ. 2022 ರ ವೇಳೆಗೆ ಹೊಸ ಸಂಸತ್ ಭವನವನ್ನು ನವೀಕರಿಸುವುದು ಅಥವಾ ನಿರ್ಮಿಸುವುದು ಮತ್ತು 2024 ರ ವೇಳೆಗೆ ಸಮಗ್ರ ಸಂಕೀರ್ಣವನ್ನು ನಿರ್ಮಾಣ ಮಾಡುವ ಸಲುವಾಗಿ 12ಕ್ಕೂ ಅಧಿಕ ಸರ್ಕಾರಿ ಕಚೇರಿಗಳನ್ನು ಧ್ವಂಸ ಮಾಡಲಾಗುತ್ತಿದೆ.
ಫೆಬ್ರವರಿ 2021 ರ ವೇಳೆಗೆ ನಾವು ರಾಜ್ಪಥ ಪ್ರದೇಶವನ್ನು ಪುನರಾಭಿವೃದ್ಧಿ ಮಾಡುವ ಕೆಲಸವನ್ನು ಪ್ರಾರಂಭಿಸುತ್ತೇವೆ. ಪ್ರಸ್ತುತ ಸ್ಥಿತಿಗೆ ಸಂಪೂರ್ಣ ಪುನರುಜ್ಜೀವನದ ಅಗತ್ಯವಿದೆ. ಅಲ್ಲಿನ ವಿದ್ಯುತ್ ಕಂಬಗಳ ಸ್ಥಿತಿ ಮತ್ತು ಅಲ್ಲಿನ ದಟ್ಟಣೆ ಮತ್ತು ರಸ್ತೆ ಮಾರಾಟಗಾರರ ಅವ್ಯವಸ್ಥೆಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ ಮತ್ತು ಅದನ್ನು ಪ್ಯಾರಿಸ್ ಅಥವಾ ವಾಷಿಂಗ್ಟನ್ ಡಿಸಿಯಂತಹ ಇತರ ದೇಶಗಳ ರಾಜಧಾನಿಗಳಿಗೆ ಹೋಲಿಕೆ ಮಾಡಿದರೆ ಅಸಹನೀಯ ಎನಿಸುತ್ತದೆ. ರಾಜಧಾನಿಗೆ ಆಧುನೀಕರಣದ ಅಗತ್ಯವಿದೆ. ಹೀಗಾಗಿ ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.